ADVERTISEMENT

ಶರಣ ಸಂಸ್ಕೃತಿ ನಾಡಿನ ಏಳ್ಗೆಗೆ ಕಾರಣ: ಶ್ರೀಕಾಂತ ದುಂಡಿಗೌಡ್ರ

ಶರಣ ಸಂಸ್ಕೃತಿ ಉತ್ಸವ-2025, ಸನ್ಮಾನ, ಪ್ರವಚನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 16:30 IST
Last Updated 5 ಮಾರ್ಚ್ 2025, 16:30 IST
<div class="paragraphs"><p>ಶಿಗ್ಗಾವಿ ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಬುಧವಾರ ನಡೆದ ಧರ್ಮ ಸಮಾರಂಭದಲ್ಲಿ ಜಾನಪದ ಕಲಾವಿದರಾದ ಬಸಣ್ಣ ಶಿಗ್ಗಾವಿ, ಶರೀಫ್ ಮಾಕಾಪುರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.&nbsp;</p></div>

ಶಿಗ್ಗಾವಿ ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಬುಧವಾರ ನಡೆದ ಧರ್ಮ ಸಮಾರಂಭದಲ್ಲಿ ಜಾನಪದ ಕಲಾವಿದರಾದ ಬಸಣ್ಣ ಶಿಗ್ಗಾವಿ, ಶರೀಫ್ ಮಾಕಾಪುರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. 

   

ಶಿಗ್ಗಾವಿ: ‘ಶರಣರು, ಮಹಾತ್ಮರು ತಮ್ಮ ಬದುಕನ್ನು ಸಮಾಜಕ್ಕಾಗಿ ಮೀಸಲು ಇಟ್ಟಿದ್ದರು. ಹೀಗಾಗಿ ಶರಣ ಸಂಸ್ಕೃತಿ ನಾಡಿನ ಏಳ್ಗೆಗೆ ಕಾರಣವಾಗಿದೆ. ಅವರ ಆದರ್ಶ ತತ್ವಗಳನ್ನು ಪಾಲಿಸಿ ಬದುಕು ಯಶಸ್ವಿಯಾಗುತ್ತಿದೆ’ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಎಂದರು.

ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಬುಧವಾರ ನಡೆದ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು

ADVERTISEMENT

ಸೀತಾಗಿರಿ ಎ. ಸಿ. ವಾಲಿ ಮಹಾರಾಜರು ಪ್ರವಚನ ನೀಡಿ,‘ನುಡಿ ಮುತ್ತಿನ ಹಾರದಂತೆ ಶರಣರ ನುಡಿಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ನುಡಿದಂತೆ ನಡೆದು ತೋರಿದ ಮಹಾತ್ಮರು, ಶರಣು ಇಂದಿಗೂ ಸ್ಮರಣಿಯರಾಗಿದ್ದಾರೆ. ಅಂತಹ ನುಡಿ ನಾವು ನುಡಿಯುವ ಮೂಲಕ ಸಮಾನತೆ, ಒಗ್ಗಟ್ಟಿನ ನಾಡು ಕಟ್ಟುವ ಕಾಯಕ ನಮ್ಮದಾಗಬೇಕು ಎಂದರು.

ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಶಂಕರಗೌಡ್ರ ಪಾಟೀಲ,ಮಾರುದ್ರಪ್ಪ ಯಲಿಗಾರ, ಎಸ್.ಎನ್.ಮುಗಳಿ, ಎಸ್.ಕೆ.ಹುಗಾರ, ಫಕ್ಕೀರೇಶ ಕೊಂಡಾಯಿ, ಶಿವಾನಂದ ಹೊಸಮನಿ, ಲಿಂಗರಾಜ ಕುನ್ನೂರ, ಶಶಿಕಾಂತ ರಾಠೋಡ, ಸಿದ್ದಲಿಂಗಪ್ಪ ನರೇಗಲ್ಲ, ಶಂಭಣ್ಣ ಹಾವೇರಿ, ಶಿವರಾಜ ಕ್ಷೌರದ, ಪಿ.ಎಸ್.ಐ ಪಿ.ಎಫ್.ನಿರೋಳ್ಳಿ ಶಿವಾನಂದ ಯಲಿಗಾರ, ಶಂಕ್ರಪ್ಪ ಅರಳೇಶ್ವರ, ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನ ಮತ್ತು ಜಾನಪದ ಕಲಾವಿದರಾದ ಬಸಣ್ಣ ಶಿಗ್ಗಾವಿ, ಶರೀಫ್ ಮಾಕಾಪುರ ತಂಡದಿಂದ ಸಂಗೀತ ಕಾರ್ಯಕ್ರಮ, ನಟರಾಜ ನಾಟ್ಯ ಶಾಲೆ ಮಕ್ಕಳ ಭರತ ನಾಟ್ಯ ಸೇರಿದಂತೆ ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.