
ಶಿಗ್ಗಾವಿ: ತಾಲ್ಲೂಕಿನ ಹಾಳನೆಲ್ಲೂರ ಗ್ರಾಮದ ಘಂಟೆ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸುತ್ತಲಿನ ಗ್ರಾಮದ ಭಕ್ತರ ನಡುವೆ ಸಡಗರ, ಸಂಭ್ರಮದಿಂದ ಶನಿವಾರ ಜರುಗಿದವು.
ಬೆಳಿಗ್ಗೆ ಘಂಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಹೋಮ ಹವನಗಳ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಂತರ ಅನ್ನ ಪ್ರಸಾದ ನಡೆಯಿತು.
ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಭಕ್ತಿ ಮಾರ್ಗದಿಂದ ಜನರ ನಡುವೆ ಉತ್ತಮ ಬಾಂಧವ್ಯ ಬೇಸೆಯಲು ಸಾಧ್ಯವಿದೆ’ ಎಂದರು.
ಮುಖಂಡರಾದ ರವಿ ನರೆಗಲ್ಲ, ಬಾಪುಗೌಡ ಪಾಟೀಲ, ಬಸವರಾಜ ನಾರಾಯಣಪುರ, ಕುಮಾರ ಉಂಕಿ, ಶಂಭಣ್ಣ ತಳವಾರ, ಎಂ.ಎಸ್. ನರೆಗಲ್ಲ, ಶಿವು ಹಡಪದ, ಜಗದೀಶ ದೊಡ್ಡಗೌಡ್ರ, ನಿಂಗಪ್ಪ ಅರಳಿಕಟ್ಟಿ, ಮಣಕಂಠ ತಳವಾರ, ಈರಣ್ಣ ಯಲಿಗಾರ, ನಾಗರಾಜ ಚಿಲ್ಲೂರ, ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.