ಶಿಗ್ಗಾವಿ: ಭಾವೈಕ್ಯ ನೆಲದ ನಕ್ಷತ್ರವಾದ ಕರ್ನಾಟಕದ ಕಬೀರ, ಭಾವೈಕ್ಯದ ಹರಿಕಾರ, ಜಾನಪದ ಸಂತ ಕವಿ ಎಂದೇ ಜಗದಲ್ಲಿ ಖ್ಯಾತಿ ಪಡೆದ ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಶರೀಫ ಶಿವಯೋಗಿಗಳ ಹಾಗೂ ಗುರು ಗೋವಿಂದ ಭಟ್ಟರ ತೆಪ್ಪದ ರಥೋತ್ಸವ ಶರೀಫಗಿರಿಯಲ್ಲಿ ಸೋಮವಾರ ಅನೇಕ ಭಕ್ತ ಸಮೂಹದ ಜಯಘೋಣೆಗಳ ನಡುವೆ ಸಂಭ್ರಮದಿಂದ ಜರುಗಿತು.
ಶಾಲಿವಾಹನ ಶಕೆ 1947ನೇ ವಿಶ್ವಾವಸುನಾಮ ಸಂವತ್ಸರ ಶ್ರಾವಣ ಮಾಸದ ಕೃಷ್ಣ ಪಕ್ಷದ ಓಂ ನಮಃ ಶಿವಾಯ ಶಿವನಾಮ ಸಪ್ತಾಹ ಪ್ರಾರಂಭವಾಗಿ ಬ್ರಾಹ್ಮೀ ಮಹೂರ್ತದಲ್ಲಿ ಮಂಗಲವಾಗುವುದು. ಹೀಗಾಗಿ ಶ್ರಾವಣ ಮಾಸದ ಕಡೇ ಸೋಮವಾರ ಸಂಜೆ ಅನೇಕ ಭಕ್ತ ಸಮೂಹದ ನೇತೃತ್ವದಲ್ಲಿ ನಡೆಯುವ ಶಿವನಾಮ ಸಪ್ತಾಹದಲ್ಲಿ ಭಜನೆ, ಝಾಂಜಮೇಳ ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ತೆಪ್ಪದ ರಥೋತ್ಸವ ನೆರವೇರಿತು.
ತೆಪ್ಪದ ರಥೋತ್ಸವದ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ಶರೀಫರ ಹಾಗೂ ಗುರುಗೋವಿಂದ ಭಟ್ಟರ ಮೂತರ್ಿ ಮೆರವಣಿಗೆ ಹಾಗೂ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯವೈಭವದೊಂದಿಗೆ ಸಂಭ್ರಮದಿಂದ ಜರುಗಿತು.
ನಂತರ ನಡೆದ ಶರೀಫರ ತೆಪ್ಪದ ರಥೋತ್ಸವಕ್ಕೆ ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ದಾವಣಗೆರೆ, ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿದಲ್ಲದೆ ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಇತರ ರಾಜ್ಯದಿಂದ ಬಂದಿರುವ ಅನೇಕ ಹಿಂದು-ಮುಸ್ಲಿಂ ಭಕ್ತ ಸಮೂಹ ಹಣ್ಣು, ಕಾಯಿ ಹಾಗೂ ಹೊಮಾಲೆಯಿಂದ ಶರೀಫರ ಗದ್ಗುಗೆ ಹಾಗೂ ತೆಪ್ಪದ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಯ ಸೇವೆ ಸಮಪರ್ಿಸುವ ಮೂಲಕ ಭಾವೈಕ್ಯ ಮೆರೆದರು.
ಮಾವಿನ ತಳಿರು ತೋರಣ ಹಾಗೂ ಹೂಮಾಲೆಗಳಿಂದ ಅಲಂಕೃತಗೊಂಡ ತೆಪ್ಪದ ರಥೋತ್ಸವ ಹಾಗೂ ನವೀಕರಿಸಿದ ಕೆರೆ ನೋಡುಗರಲ್ಲಿ ನಯನ ಮನೋಹರವಾಗಿ ಕಂಗೊಳಿಸುತ್ತಿತ್ತು. ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್ ಸಹಯೋಗದಲ್ಲಿ ನಡೆದ ತೆಪ್ಪದ ರಥೋತ್ಸವ ಅಂಗವಾಗಿ ಶರಣ ವೀರಭದ್ರಪ್ಪ ಶಿವರುದ್ರಣ್ಣನವರ ದಾಸೋಹ ನಿಧಿಯಿಂದ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಪಂಚಾಗ್ನಿಮಠದ ಟ್ರಸ್ಟ್‌ನ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅನೇಕ ರಾಜಕೀಯ ಮುಖಂಡರು, ಸಾಹಿತಿಗಳು, ಜಾನಪದ ಕಲಾವಿದರು ಹಾಗೂ ಭಕ್ತ ಸಮೂಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.