ADVERTISEMENT

ಶ್ರೀಗುರು ಪುಟ್ಟರಾಜ ಪುರಸ್ಕಾರ ಪ್ರದಾನ 

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 15:47 IST
Last Updated 3 ಮಾರ್ಚ್ 2023, 15:47 IST
ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ಶುಕ್ರವಾರ ಪುಟ್ಟರಾಜ ಕವಿ ಗವಾಯಿಗಳ 109ನೇ ಜಯಂತ್ಯುತ್ಸವ ಅಂಗವಾಗಿ ನಾಡಿನ ಐವರು ಸಾಧಕರಿಗೆ ‘ಶ್ರೀ ಗುರು ಪುಟ್ಟರಾಜ ಪುರಸ್ಕಾರ–2023’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ಶುಕ್ರವಾರ ಪುಟ್ಟರಾಜ ಕವಿ ಗವಾಯಿಗಳ 109ನೇ ಜಯಂತ್ಯುತ್ಸವ ಅಂಗವಾಗಿ ನಾಡಿನ ಐವರು ಸಾಧಕರಿಗೆ ‘ಶ್ರೀ ಗುರು ಪುಟ್ಟರಾಜ ಪುರಸ್ಕಾರ–2023’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹಾವೇರಿ: ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ಗದಗದ ಗಾನ ಗಂಧರ್ವ ಕಲಾ ಟ್ರಸ್ಟ್‌ ಮತ್ತು ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳ ಸಂಗೀತ ಪಾಠಶಾಲೆ ಸಹಯೋಗದಲ್ಲಿ ಶುಕ್ರವಾರ ಪುಟ್ಟರಾಜ ಕವಿ ಗವಾಯಿಗಳ 109ನೇ ಜಯಂತ್ಯುತ್ಸವ ಅಂಗವಾಗಿ ನಾಡಿನ ಐವರು ಸಾಧಕರಿಗೆ ‘ಶ್ರೀ ಗುರು ಪುಟ್ಟರಾಜ ಪುರಸ್ಕಾರ–2023’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದೇವಗಿರಿಯ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಕೀರ್ತನಕಾರ ಜಿ.ಎಂ. ಗುರುಸಿದ್ಧೇಶ್ವರ ಶಾಸ್ತ್ರಿಗೆ ‘ಕೀರ್ತನ ಶ್ರೀ’, ಗದಗದ ರಂಗನಟ ಹರೀಶ ಹಿರಿಯೂರಗೆ ‘ರಂಗ ಶ್ರೀ’, ಕಲಬುರ್ಗಿಯ ಹಿಂದೂಸ್ತಾನಿ ಗಾಯಕ ಸಿದ್ದರಾಮ ಪೊಲೀಸ್‌ ಪಾಟೀಲಗೆ ‘ಗಾಯನ ಶ್ರೀ’, ಗದಗದ ವಿಭೂತಿ ಮಾಸ ಪತ್ರಿಕೆಯ ಸಂಪಾದಕ ಅಂದಾನಪ್ಪ ವಿಭೂತಿಗೆ ‘ಸಾಹಿತ್ಯ ಶ್ರೀ’, ಗುತ್ತರಗಿಯ ತಬಲಾ ವಾದಕ ಶರಣಕುಮಾರ ಕಲಬುರ್ಗಿಗೆ ‘ವಾದನ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಕೂಡಲದ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಮಾರಸ್ವಾಮಿ ಗಡ್ಡದಮಠ, ಪದಾಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.