ಬ್ಯಾಡಗಿ: ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣೆಗೆಗೆ ಸಹಕಾರಿಯಾಗಿದ್ದು, ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಹಿರೇಅಣಜಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯದ ಜೊತೆಗೆ ನೈತಿಕತೆ ಬೆಳಸಿಕೊಳ್ಳಬೇಕಾಗಿದೆ. ಕ್ರೀಡಾ ಚಟುವಟಿಕೆಗಳು ಕ್ರೀಡಾಕೂಟಕ್ಕೆ ಮಾತ್ರ ಸೀಮಿತವಾಗಬಾರದು. ಅವು ನಿರಂತರವಾಗಿ ನಡೆಯಬೇಕೆಂದು ಹೇಳಿದರು.
ಈ ವೇಳೆ ಗ್ರಾಮದ ಮುಖಂಡರಾದ ಶಿವಪ್ಪ ಕೋಡದ, ಹೊನ್ನಪ್ಪ ಪುಟ್ಟಣ್ಣನವರ, ಶಿವಪುತ್ರಪ್ಪ ಜಿಗಳಿಕೊಪ್ಪ, ರಾಘವೇಂದ್ರ ಗಿಡ್ಡೇರ, ಬಸನಗೌಡ ದಾನೆಗೊಂಡರ, ಅಬ್ದುಲ್‌ಮುನಾಫ್ ಎಲಿಗಾರ, ಗ್ರಾಮ ಪಂಚಾಯ್ತಿ ಸದಸ್ಯರಾದ ರೇಖಾ ಜಿಗಳಿಕೊಪ್ಪ, ಕುಸುಮಾ ಗಿಡ್ಡೇರ, ಸುಮಿತ್ರಾ ಹಡಪದ, ಭೋಜಯ್ಯ ಹಿರೇಮಠ, ರೇಣುಕಾ ಈಳಗೇರ, ಮುಖ್ಯ ಶಿಕ್ಷಕ ಹುಚ್ಚಣ್ಣನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.