ಹಂಸಬಾವಿ: ಇಲ್ಲಿಗೆ ಸಮೀಪದ ಯತ್ತಿನಹಳ್ಳಿ ಎಂಕೆಸಿಆರ್‌ಸಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಯತ್ತಿನಹಳ್ಳಿ ಎಂ.ಕೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಸಮಗ್ರ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಬಾಲಕರ ಗುಂಪು ಆಟದಲ್ಲಿ: ಕೊಕ್ಕೊ ಪ್ರಥಮ, ಕಬ್ಬಡ್ಡಿ ಪ್ರಥಮ, ಥ್ರೋಬಾಲ್ ಪ್ರಥಮ, ವಾಲಿಬಾಲ್ ದ್ವಿತೀಯ.
ಬಾಲಕಿಯರ ಗುಂಪು ಆಟದಲ್ಲಿ: ಕ್ಕೊಕ್ಕೊ ಪ್ರಥಮ, ವಾಲಿಬಾಲ್ ದ್ವಿತೀಯ, ಥ್ರೋಬಾಲ್ ದ್ವಿತೀಯ.
ಬಾಲಕಿಯರ ವೈಯಕ್ತಿಕ ಆಟ: 80 ಹರ್ಡಲ್ಸ್ -ಸೌಮ್ಯ ಬತ್ತಿಕೊಪ್ಪ ದ್ವಿತೀಯ, 100 ಮೀ. ಓಟ– ಕಾವೇರಿ ಬಿಸಲಿಹಳ್ಳಿ ಪ್ರಥಮ, 200 ಮೀ ಓಟ –ಸೌಮ್ಯ ಬತ್ತಿಕೊಪ್ಪ ದ್ವಿತೀಯ, 400 ಮೀ ಓಟ –ಕಾವೇರಿ ಬಿಸಲಿಹಳ್ಳಿ ಪ್ರಥಮ, 600 ಮೀ ಓಟ, ಉದ್ದ ಜಿಗಿತ –ಕಾವೇರಿ ಬಿಸಲಿಹಳ್ಳಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬಾಲಕಿಯರ ವಿಭಾಗದ ವಿರಾಗ್ರಣಿ ಪ್ರಶಸ್ತಿಯನ್ನು ಕಾವೇರಿ ಬಿಸಲಿಹಳ್ಳಿ ಪಡೆದಿದ್ದಾಳೆ.
ಗಂಡು ಮಕ್ಕಳ ವೈಯಕ್ತಿಕ ಆಟದಲ್ಲಿ: 80 ಮೀಟರ್ ಹಾಡಲ್ಸ್ –ಚೇತನ್ ಮಡಿವಾಳರ ಪ್ರಥಮ, 200 ಮೀ ಓಟ –ಚೇತನ್ ಮಡಿವಾಳರ ಪ್ರಥಮ, 400 ಮೀ ಓಟ –ಚಿರಂಜೀವಿ ಕೆಳಗಿನಮನಿ ದ್ವಿತೀಯ, 600 ಮೀ ಓಟ –ಗುಣ ಹರಿಜನ್ ದ್ವಿತೀಯ, ಉದ್ದ ಜಿಗಿತ –ಚೇತನ್ ಮಡಿವಾಳ ದ್ವಿತೀಯ ಸ್ಥಾನ ಪಡೆದಿದ್ದು, ಬಾಲಕರ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿಯನ್ನು ಚೇತನ್ ಮಡಿವಾಳರ್ ಪಡೆದಿದ್ದಾನೆ ಎಂದು ಮುಖ್ಯ ಶಿಕ್ಷಕಿ ಎಸ್.ವಿ. ಅತ್ತಿಕಟ್ಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.