ADVERTISEMENT

ಹಾವೇರಿ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:02 IST
Last Updated 19 ಸೆಪ್ಟೆಂಬರ್ 2020, 12:02 IST

ಹಾವೇರಿ: ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ಸೆ.21ರಿಂದ ಸೆ.28ರವರೆಗೆ ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ಅವ್ಯವಹಾರ ನಡೆಯದಂತೆ ಮತ್ತು ಶಾಂತಿ ಪಾಲನೆ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಭಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ನಿರ್ಬಂಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪುಗಳ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಬರುವ ಜೆರಾಕ್ಸ್‌‌ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್‌ಗಳನ್ನು ಮುಚ್ಚಿಸಲು ಆದೇಶಿಸಲಾಗಿದೆ ಹಾಗೂ ಮೊಬೈಲ್ ಫೋನ್ ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ವಿವರ

ADVERTISEMENT

ಬ್ಯಾಡಗಿ ಪಟ್ಟಣದ ಎಸ್.ಜೆ.ಜೆ.ಎಂ.ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ನೂತನ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ, ಹಾನಗಲ್ ನಗರದ ಎನ್.ಸಿ.ಜೆ.ಸಿ. ಪ.ಪೂ. ಕಾಲೇಜು, ರೋಷನಿ ಪ್ರೌಢಶಾಲೆ ಅಕ್ಕಿಆಲೂರು ಎನ್.ಆರ್.ದೇಸಾಯಿ ಪ್ರೌಢಶಾಲೆ, ಹಾವೇರಿ ನಗರದ ಮುನ್ಸಿಪಲ್ ಪ್ರೌಢಶಾಲೆ, ಎಸ್.ಎಂ.ಎಸ್.ಬಾಲಕಿಯರ ಪ್ರೌಢಶಾಲೆ, ಹುಕ್ಕೇರಿಮಠ ಪ್ರೌಢಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸೆಂಟ್ ಆನ್ಸ್ ಪ್ರೌಢಶಾಲೆ(2 ಕೇಂದ್ರ) ಹಾಗೂ ಗುತ್ತಲ ಎಸ್.ಆರ್.ಎಸ್.ಪ್ರೌಢಶಾಲೆ, ಹಿರೇಕೆರೂರು ಪಟ್ಟಣದ ಡಿ.ಆರ್.ತಂಬಾಕದ ಪ್ರೌಢಶಾಲೆ, ಸಿ.ಇ.ಎಸ್.ಬಾಲಿಕಾ ಪ್ರೌಢಶಾಲೆ ಹಾಗೂ ರಟ್ಟಿಹಳ್ಳಿ ಶ್ರೀ ಕುಮಾರೇಶ್ವರ ಬಾಲಕರ ಸಂ.ಪ.ಪೂ. ಕಾಲೇಜು.

ರಾಣೆಬೆನ್ನೂರು ನಗರದ ಸಿದ್ದೇಶ್ವರ ವಸತಿ ಪ್ರೌಢಶಾಲೆ, ನಗರಸಭಾ ಬಾಲಕರ ಪ್ರೌಢಶಾಲೆ, ಅಂಜುಮನ್ ಆಂಗ್ಲೋ ಉರ್ದು ಪ್ರೌಢಶಾಲೆ, ಹಲಗೇರಿ ಹಾಲಸಿದ್ದೇಶ್ವರ ಸಂ.ಪ.ಪೂ.ಕಾಲೇಜು, ದೇವರಗುಡ್ಡ ಮಾಲತೇಶ ಪ್ರೌಢಶಾಲೆ, ಚಳಗೇರಿ ಸಿ.ಇ.ಎಸ್.ಪ್ರೌಢಶಾಲೆ ಹಾಗೂ ಅರೇಮಲ್ಲಾಪೂರ ಕರ್ನಾಟಕ ಪಬ್ಲಿಕ್ ಸ್ಕೂಲ್, ಸವಣೂರಿನ ವಿದ್ಯಾಭಾರತಿ ಪ್ರೌಢಶಾಲೆ ಹಾಗೂ ಎಸ್.ಎಫ್..ಎಸ್.ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿಗ್ಗಾವಿಯ ಎಸ್.ಬಿ.ಬಿ.ಎಂ.ಡಿ. ಪ.ಪೂ.ಕಾಲೇಜು, ಚನ್ನಪ್ಪ ಕುನ್ನೂರ ಪ.ಪೂ.ಕಾಲೇಜು, ಜೆ.ಎಂ.ಜೆ.ಪ್ರೌಢಶಾಲೆ ಹಾಗೂ ಕೊಟ್ಟಿಗೇರಿ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಪರೀಕ್ಷೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.