ADVERTISEMENT

ಹಿರೇಕೆರೂರು: ಶಿಲಾಯುಗದ ಪಳಿಯುಳಿಕೆ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:00 IST
Last Updated 5 ಜೂನ್ 2025, 23:00 IST
ಹಿರೇಕೆರೂರು ತಾಲ್ಲೂಕಿನ ಬಾಳಂಬಿಡ ಗ್ರಾಮದ ರೈತ ಮಲ್ಲಿಕಾರ್ಜುನ ಜೋಗಿಹಳ್ಳಿ  ಜಮೀನಿನಲ್ಲಿ ಪತ್ತೆಯಾದ ಶಿಲಾಯುಗದ ಪಳಿಯುಳಿಕೆಗಳು
ಹಿರೇಕೆರೂರು ತಾಲ್ಲೂಕಿನ ಬಾಳಂಬಿಡ ಗ್ರಾಮದ ರೈತ ಮಲ್ಲಿಕಾರ್ಜುನ ಜೋಗಿಹಳ್ಳಿ  ಜಮೀನಿನಲ್ಲಿ ಪತ್ತೆಯಾದ ಶಿಲಾಯುಗದ ಪಳಿಯುಳಿಕೆಗಳು   

ಹಿರೇಕೆರೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಬಾಳಬಿಂಡ ಗ್ರಾಮದ ರೈತ ಮಲ್ಲಿಕಾರ್ಜುನ ಜೋಗಿಹಳ್ಳಿ ಎಂಬುವರ ಜಮೀನಿನಲ್ಲಿ 300 ವರ್ಷಗಳ ಹಿಂದಿನ ಶಿಲಾಯುಗದ ಪಳಿಯುಳಿಕೆಗಳು ಪತ್ತೆಯಾಗಿವೆ.

‘ಇದೊಂದು ಪ್ರಾಚೀನ ಕಾಲದ ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆ’ ಎಂದು ಇತಿಹಾಸತಜ್ಞ ಆರ್.ಎಂ. ಷಡಾಕ್ಷರಯ್ಯ ತಿಳಿಸಿದ್ದಾರೆ. ಈ ನೆಲೆಯನ್ನು ಹಂಸಭಾವಿ ಮಹಾಂತಸ್ವಾಮಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎಂ.ಅಕ್ಕಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಗರಾಜಪ್ಪ ಎಂ.ಎಸ್. ಅವರು ಈಚೆಗೆ ಪತ್ತೆ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಸಂಶೋಧಕ ಈರಣ್ಣ ಪತ್ತಾರ ಕೂಡ ಅಧ್ಯಯನ ಮಾಡಿದ್ದರು.

‘ಅರ್ಧ ಹೆಕ್ಟೇರ್ ವಿಸ್ತಾರದ ಜಮೀನಿನಲ್ಲಿ ಅರ್ಧ ಅಡಿ ಗುಂಡಿ ತೋಡಿದಾಗ, ಅಲ್ಲಿ ಕೆಂಪು ಬಣ್ಣದ ಮಡಿಕೆ ಚೂರುಗಳು ಸಿಕ್ಕಿವೆ. ಮಡಿಕೆಗಳ ಬಣ್ಣ, ರಚನೆ, ವಿನ್ಯಾಸ ಗಮನಿಸಿದರೆ, ಹಳ್ಳೂರು ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ, ಹರಪನಹಳ್ಳಿ ತಾಲ್ಲೂಕಿನ ಮರಬಳ್ಳಿ ನೆಲೆಗಳಿಗೆ ಹೋಲಿಕೆಯಾಗುತ್ತಿವೆ’ ಎಂದು ಸಂಶೋಧಕರು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.