
ರಾಣೆಬೆನ್ನೂರು: ಪ್ರೇಮಿಗಳ ದಿನದ ನೆಪದಲ್ಲಿ ನಡೆಯುವ ಅನಾಗರಿಕ ವರ್ತನೆ ತಡೆಗಟ್ಟಲು ವಿಶೇಷ ಪೊಲೀಸ್ ದಳ ರಚಿಸಿ ಪಾಶ್ಚಿಮಾತ್ಯರ ಆಚರಣೆಯನ್ನು ಸಂಪೂರ್ಣ ಹೋಗಲಾಡಿಸಬೇಕು’ ಎಂದು ಆಗ್ರಹಿಸಿ ಹಿ೦ದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.
ಜನ ಜಾಗೃತಿ ಸಮಿತಿ ಮುಖಂಡ ಕೃಷ್ಣಾಸಾ ಪವಾರ ಮಾತನಾಡಿ, ‘ಫೆ.14ರಂದು ‘ಪ್ರೇಮಿಗಳ ದಿನ’ ಹೆಸರಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅನುಕರಿಸುತ್ತಿದ್ದಾರೆ. ಇದರಿಂದ ಭಾರತೀಯ ಸನಾತನ ಸಂಸ್ಕೃತಿ ಆಚರಣೆಗೆ ಅಡ್ಡಿಯಾಗುತ್ತಿದೆ’ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ವೆಂಕಟರಮಣ ನಾಯಕ್, ಶಿವಕುಮಾರ ಹಿರೇಮಠ, ನಾಗರಾಜ ಬದಿ ಹಾಗೂ ಸಮಿತಿಯ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.