ರಾಣೆಬೆನ್ನೂರು: ಮಕ್ಕಳಲ್ಲಿ ಜಂತುಹುಳ ನಿವಾರಣೆ ಮಾಡುವುದು ಅತಿ ಅಗತ್ಯ ಎಂದು ಪ್ರಾಚಾರ್ಯ ಪಿ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಸುಣಕಲ್ಲಬಿದರಿ ಸದ್ಗುರು ಶಿವಾನಂದ ಸಂಯುಕ್ತ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಜಂತು ಹುಳು ನಿಯಂತ್ರಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಲ್ಬೆಂಡಝೋಲ್ ಮಾತ್ರೆಗಳನ್ನು ವಿತರಿಸಿ ಅವರು ಮಾತನಾಡಿದರು.
‘ಹೊಟ್ಟೆಯಲ್ಲಿ ಜಂತು ಹುಳು ಆಗಿದ್ದರೆ ಮಕ್ಕಳಲ್ಲಿ ರಕ್ತ ಹೀನತೆ, ಪೌಷ್ಟಿಕಾಂಶ ಕೊರತೆ, ನಿಶ್ಯಕ್ತಿ, ಹಸಿವು ಆಗದಿರುವುದು, ಹೊಟ್ಟೆ ನೋವು ಕಂಡು ಬರುತ್ತದೆ. ಇದನ್ನು ನಿರ್ವಹಿಸುವುದಕ್ಕಾಗಿ 1ರಿಂದ 19 ವರ್ಷದ ಎಲ್ಲ ಮಕ್ಕಳಿಗೂ ಶಾಲೆಗಳಲ್ಲಿ ಈ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.
ಜಿಲ್ಲಾ ನೋಡಲ್ ಎನ್ಎಸ್‌ಎಸ್ ಅಧಿಕಾರಿಗಳಾದ ಎಚ್. ಶಿವಾನಂದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳಲ್ಲಿ ಜಂತುಹುಳುಗಳು ಪೋಷಕಾಂಶಗಳ ಸೇವನೆಗೆ ಅಡ್ಡಿಪಡಿಸುತ್ತವೆ. ರಕ್ತ ಹೀನತೆ, ಅಪೌಷ್ಟಿಕತೆ, ದುರ್ಬಲ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಈ ಮಾತ್ರೆಗಳನ್ನು ಸೇವಿಸಬೇಕು’ ಎಂದು ಹೇಳಿದರು.
ರೇವಣ್ಣ ನಾಯಕ, ಕರಿಬಸಪ್ಪ ಗುಗ್ರಿ, ಮಲ್ಲಿಕಾರ್ಜುನ ಮುರ್ನಾಳ, ಸಂತೋಷ ಅಂಗಡಿ, ಪೂರ್ಣಿಮಾ ಮಗನೂರು, ಆರೋಗ್ಯ ನಿರೀಕ್ಷಾಧಿಕಾರಿ ರಾಧಿಕಾ ಕೆ.ಎನ್., ಆಶಾ ಕಾರ್ಯಕರ್ತರಾದ ಗಂಗಮಾಳವ್ವ, ಕುಸಗೂರು, ಸುನಂದ ಕುಸಗೂರು, ಅಕ್ಕಮ್ಮ ಇಮ್ಮಡಿ, ದ್ರಾಕ್ಷಾಯಿಣಿ ಕಮ್ಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.