ADVERTISEMENT

ತಡಸ: ಬೆಳ್ಳಿ ತಟ್ಯಾಗ್ ಮುತ್ತು ಸುರಿದು ತುಂಬಿ ತುಳುಕಿತ್ತಲೇ ಪರಾಕ್–ಕಾರ್ಣಿಕ ನುಡಿ

ರಾಮನವಮಿ: ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಕಾರ್ಣಿಕ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 15:33 IST
Last Updated 6 ಏಪ್ರಿಲ್ 2025, 15:33 IST
ಶ್ಯಾಡಂಬಿ ಗ್ರಾಮದಲ್ಲಿ ರಾಮನವಮಿ ದಿನ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ ಕಾರ್ಣಿಕ ನಡೆಯಿತು
ಶ್ಯಾಡಂಬಿ ಗ್ರಾಮದಲ್ಲಿ ರಾಮನವಮಿ ದಿನ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ ಕಾರ್ಣಿಕ ನಡೆಯಿತು   

ಶ್ಯಾಡಂಬಿ(ತಡಸ): ‘ಬೆಳ್ಳಿ ತಟ್ಯಾಗ್ ಮುತ್ತು ಸುರಿದು ತುಂಬಿ ತುಳುಕಿತ್ತಲೇ ಪರಾಕ್’...

ಇದು ಶ್ಯಾಡಂಬಿ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ಅವರು ನುಡಿದ ಕಾರ್ಣಿಕ.

ಶ್ಯಾಡಂಬಿ ಗ್ರಾಮದಲ್ಲಿ ರಾಮನವಮಿ ದಿನ, ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಕಾರ್ಣಿಕ ನಡೆಯಿತು.

ADVERTISEMENT

ಮಾರ್ಚ್‌ 9ರಿಂದ ನಾಲ್ಕು ವಾರ ಹಿಡಿದು ಕೊನೆಯ ವಾರ ಭಾನುವಾರ ಮೈಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪಲ್ಲಕಿ ಉತ್ಸವ, ಜವಳ, ದೀಡ್‌ ನಮಸ್ಕಾರ ಹಾಕುವ ಕಾರ್ಯಕ್ರಮ ನೆರವೇರಿದವು. ತಿಂಗಳ ಕೊನೆಯ ಭಾನುವಾರ ರಾಮನವಮಿ ದಿನದಂದು ಮೈಲಾರಲಿಂಗೇಶ್ವರ ಹಾಗೂ ವೀರಭದ್ರೇಶ್ವರ ಜಾತ್ರೆ ನಡೆಯಿತು.

ಬೆಳಿಗ್ಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಂದ ಡೋಣಿ ತುಂಬಿಸುವ ಕಾರ್ಯಕ್ರಮ ನಂತರ ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ಮಧ್ಯಾಹ್ನ ಗ್ರಾಮದ ವೀರಭದ್ರಗೌಡ ಪಾಟೀಲ ಅವರ ಮನೆಯ ಮುಂದೆ ಕಾರ್ಣಿಕದ ಗೊರವಯ್ಯ ಬಿಲ್ಲನ್ನು ಏರಿ ಕಾರ್ಣಿಕ ನುಡಿದಾಗ ನೆರೆದ ಭಕ್ತರು ಜಯಘೋಷ ಮೊಳಗಿಸಿದರು. ನೆರೆದ ಭಕ್ತರು ಕಾರ್ಣಿಕದ ಕುರಿತು ನಾನಾರ್ಥದಲ್ಲಿ ವಿಶ್ಲೇಷಣೆ ಮಾಡಿದರು. ಮಳೆ, ಬೆಳೆ ಚನ್ನಾಗಿ ಆಗಲಿದೆ ಎಂದು ವಿಶ್ಲೇಷಣೆ ಮಾಡಿದರು. ಬಳಿಕ ಸರಪಳಿ ಪವಾಡ ಹಾಗೂ ವಿವಿಧ ಪವಾಡಗಳು ನಡೆದವು.

ರಮೇಶ ಗೋನಾಳ ಮೈಲಾರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಧರ್ಮಣ್ಣ ಕಿವಡನವರ ಹೇಮಂತ್ ಮೋದಿ, ಶರೀಫ ಮಾಕಪ್ಪನವರ, ಹಣಮಂತಪ್ಪ ಸುಣಗಾರ, ಬಸನಗೌಡ ಪಾಟೀಲ, ಮಾಲತೇಶ್ ಕುಲಕರ್ಣಿ, ಸುರೇಶ ಭೀಮನವರ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.