ADVERTISEMENT

ಹಾವೇರಿ: 991ಕ್ಕೆ ಏರಿದ ಕೋವಿಡ್‌ ಪ್ರಕರಣ

ಜಿಲ್ಲೆಯಲ್ಲಿ 56 ಮಂದಿಗೆ ಸೋಂಕು ದೃಢ: 35 ಮಂದಿ ಗುಣಮುಖರಾಗಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:26 IST
Last Updated 31 ಜುಲೈ 2020, 15:26 IST
ಕುಮಾರಪಟ್ಟಣ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಇಬ್ಬರು ಪುರುಷರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಮನೆ ಸೇರಿದಂತೆ ಗ್ರಾಮದ ಮುಖ್ಯ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ
ಕುಮಾರಪಟ್ಟಣ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಇಬ್ಬರು ಪುರುಷರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಮನೆ ಸೇರಿದಂತೆ ಗ್ರಾಮದ ಮುಖ್ಯ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ   

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ 56 ಮಂದಿಗೆ ಕೋವಿಡ್-19 ದೃಢಪಟ್ಟಿದೆ. 35 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 991 ಕೋವಿಡ್‌ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 557 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 27 ಮಂದಿ ಮೃತಪಟ್ಟಿದ್ದಾರೆ. 407 ಪ್ರಕರಣಗಳು ಸಕ್ರಿಯವಾಗಿವೆ.

ಶುಕ್ರವಾರ ಪತ್ತೆಯಾದ ಪ್ರಕರಣಗಳಲ್ಲಿ ಶಿಗ್ಗಾವಿ-5, ಸವಣೂರು ಹಾಗೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ ತಲಾ 7, ಹಿರೇಕೆರೂರು -14 ಹಾಗೂ ಹಾವೇರಿ ತಾಲೂಕಿನಲ್ಲಿ 23 ಪ್ರಕರಣಗಳು ಪತ್ತೆಯಾಗಿವೆ. ಆರು ಪೊಲೀಸರಿಗೆ ಹಾಗೂ ಕೆ.ಎಸ್.ಆರ್.ಟಿ.ಸಿ. ಚಾಲಕನಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಶಿಗ್ಗಾವಿ ತಾಲ್ಲೂಕು:ಗಂಗಿಭಾವಿಯ ಕೆ.ಎಸ್.ಆರ್.ಪಿ 56 ವರ್ಷದ ಪೊಲೀಸ್, ಶಿಗ್ಗಾವಿ ಪೊಲೀಸ್ ಠಾಣೆಯ 44 ವರ್ಷದ ಪೊಲೀಸ್ ಹಾಗೂ 47 ವರ್ಷದ ಹೆಡ್ ಕಾನ್‍ಸ್ಟೆಬಲ್‌, ಪಾನ್‍ಶಾಪನ ಶಿಗ್ಗಾವಿ ಕುಂಬಾರ ಓಣಿಯ 32 ವರ್ಷದ ಪುರುಷ, ಬಂಕಾಪುರ ಶಾ ಬಜರಾನ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸವಣೂರ ತಾಲ್ಲೂಕು:ಅಂಬೇಡ್ಕರ ನಗರದ 32 ವರ್ಷದ ಮಹಿಳೆ, ಹಾವಣಗಿ ಪ್ಲಾನ್ ಸಲೂನ್ ಶಾಪ್‍ನ 47 ವರ್ಷದ ಪುರುಷ, ಹಾವಣಗಿ ಪ್ಲಾಟನ್ 41 ವರ್ಷದ ಮಹಿಳೆ, ಮಂಟಗಣಿಯ 73 ವರ್ಷದ ಪುರುಷ, ದಂಡಿನಪೇಟೆಯ 20 ವರ್ಷದ ಯುವಕ, 27 ವರ್ಷದ ಯುವಕ, ಲಾಲಸಕಟ್ಟೆ ಎ.ಎನ್.ಸಿ. 22 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರ ತಾಲ್ಲೂಕು:ಕೋಟಿಯಾಳದ 65 ವರ್ಷದ ಪುರುಷ, ಮೈದೂರು 62 ವರ್ಷದ ಪುರುಷ, ನಾನ್ ಕ್ಲಿನಿಕಲ್ ನೌಕರ 61 ವರ್ಷದ ಮಹಿಳೆ, ವಿನಾಯಕ ನಗರದ 44 ವರ್ಷದ ಪುರುಷ, ಕೆ.ಎಚ್.ಡಿ.ಸಿ ಕಾಲೊನಿಯ ಬಟ್ಟೆ ಅಂಗಡಿಯ 65 ವರ್ಷದ ಪುರುಷ, ಹಲಗೇರಿಯ 50 ವರ್ಷದ ಪುರುಷ, ಗಣೇಶ ನಗರದ 41 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಿರೇಕೆರೂರು ತಾಲ್ಲೂಕು:ಹಂಸಭಾವಿಯ ಪೊಲೀಸ್ ವಸತಿ ಗೃಹದ 20 ವರ್ಷದ ಯುವತಿ, ಹಿರೇಕೆರೂರು ಬಸವೇಶ್ವರನಗರದ 45 ವರ್ಷದ ಮಹಿಳೆ, 14 ವರ್ಷದ ಬಾಲಕ, 2 ವರ್ಷದ ಬಾಲಕಿ, 8 ವರ್ಷದ ಬಾಲಕಿ, 31 ವರ್ಷದ ಮಹಿಳೆ ಹಾಗೂ 30 ವರ್ಷದ ಮಹಿಳೆ, 40 ವರ್ಷದ ಪುರುಷ, ರಟ್ಟೀಹಳ್ಳಿಯ 45 ವರ್ಷದ ಪುರುಷ, ಶಿರಗುಂಬಿ ಗ್ರಾಮದ 35 ವರ್ಷದ ಪುರುಷ, ಗುಡ್ಡದಮಾದಾಪೂರದ 7 ತಿಂಗಳ ಹೆಣ್ಣು ಮಗು, ಮಾಸೂರಿನ 30 ವರ್ಷದ ಪುರುಷ, 38 ವರ್ಷದ ಮಹಿಳೆ, 23 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ತಾಲ್ಲೂಕು:ಬಸವೇಶ್ವರನಗರದ 43 ವರ್ಷದ ಪಿಗ್ಮಿ ಏಜೆಂಟ್, ಎಂ.ಜಿ.ರಸ್ತೆಯ 74 ವರ್ಷದ ಪುರುಷ, ಅಶ್ವಿನಿನಗರದ 73 ವರ್ಷದ ಪುರುಷ, ಅಂಗಡಿ ಗ್ರಾಮದ 23 ವರ್ಷದ ಯುವಕ, ಸಂಚಾರಿ ಪೊಲೀಸ್‍ ಸಿಬ್ಬಂದಿ ಇಜಾರಿಲಕಮಾಪೂರದ 50 ವರ್ಷದ ಪುರುಷ ಹಾಗೂ 53 ವರ್ಷದ ಪುರುಷ, ಶಿವಾಜಿನಗರದ 45 ವರ್ಷದ ಪುರುಷ, ಶಾಂತಿನಗರದ 28 ವರ್ಷದ ಮಹಿಳೆ, ಅಶ್ವಿನಿನಗರದ 47 ವರ್ಷದ ರಿಸರ್ವ್‌ ಪೊಲೀಸ್ ವಿಭಾಗದ ಎ.ಎಸ್.ಐ, ನಾಗೇಂದ್ರನಮಟ್ಟಿಯ 38 ವರ್ಷದ ಪುರುಷ, ಶಿವಾಜಿನಗರದ 21 ವರ್ಷದ ಯುವಕ, ಬಸವೇಶ್ವನಗರದ 43 ವರ್ಷದ ಪುರುಷ, ಕಾಟೇನಹಳ್ಳಿಯ 9 ವರ್ಷದ ಬಾಲಕಿ, ಅಗಡಿಯ 55 ವರ್ಷದ ಮಹಿಳೆ, ಪುರದ ಓಣಿಯ 22 ವರ್ಷದ ಯುವತಿ, ವಿದ್ಯಾನಗರದ 58 ವರ್ಷದ ಕೆ.ಎಸ್.ಆರ್.ಟಿ.ಸಿ. ವಾಹನ ಚಾಲಕ, ಕೋಳೂರಿನ 59 ವರ್ಷದ ಪುರುಷ ಹಾಗೂ 58 ವರ್ಷದ ಮಹಿಳೆ, ರಜಪೂತಗಲ್ಲಿಯ 20 ವರ್ಷದ ಯುವತಿ, 27 ವರ್ಷದ ಪುರುಷ, ಪುರದ ಓಣಿಯ 38 ವರ್ಷದ ಪುರುಷ ಹಾಗೂ 55 ವರ್ಷದ ಮಹಿಳೆ ಹಾಗೂ ಭಾವಿಕಟ್ಟೆಯ ಓಣಿಯ 55 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗುಣಮುಖರ ವಿವರ: ಹಾವೇರಿ-2, ರಾಣೆಬೆನ್ನೂರು, ಹಾನಗಲ್ ಹಾಗೂ ಹಿರೇಕೆರೂರು ತಾಲ್ಲೂಕಿನ ತಲಾ -5, ಸವಣೂರ-7 ಹಾಗೂ ಶಿಗ್ಗಾವಿ ತಾಲ್ಲೂಕಿನ 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.