ADVERTISEMENT

ದಾನಧರ್ಮದ ಕಾಯಕ ಸರ್ವ ಶ್ರೇಷ್ಠ: ವಿರಕ್ತಮಠದ ಸಂಗನಬಸವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:19 IST
Last Updated 13 ಜನವರಿ 2026, 3:19 IST
ಶಿಗ್ಗಾವಿ ಪಟ್ಟಣದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ನರಸೀಪುರದಲ್ಲಿ ನಡೆಯುವ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವದ ಅನ್ನದಾಸೋಹಕ್ಕಾಗಿ ತಾಲ್ಲೂಕಿನ ಭಕ್ತರಿಂದ ಸಂಗ್ರಹಿಸಿದ ದವಸ ದಾನ್ಯಗಳನ್ನು ಮಠಕ್ಕೆ ದಾನ ನೀಡುವ ಕಾರ್ಯಕ್ರಮಕ್ಕೆ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಚಾಲನೆ ನೀಡಿದರು.
ಶಿಗ್ಗಾವಿ ಪಟ್ಟಣದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ನರಸೀಪುರದಲ್ಲಿ ನಡೆಯುವ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವದ ಅನ್ನದಾಸೋಹಕ್ಕಾಗಿ ತಾಲ್ಲೂಕಿನ ಭಕ್ತರಿಂದ ಸಂಗ್ರಹಿಸಿದ ದವಸ ದಾನ್ಯಗಳನ್ನು ಮಠಕ್ಕೆ ದಾನ ನೀಡುವ ಕಾರ್ಯಕ್ರಮಕ್ಕೆ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಚಾಲನೆ ನೀಡಿದರು.   

ಶಿಗ್ಗಾವಿ: ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವದ ಅನ್ನದಾಸೋಹಕ್ಕಾಗಿ ಭಕ್ತ ಸಮೂಹ ದವಸ ಧಾನ್ಯಗಳನ್ನು ದಾನ ಮಾಡುವ ಮೂಲಕ ಒಗ್ಗಟ್ಟಿನ ಪ್ರದರ್ಶನ ತೋರಿದ್ದಾರೆ. ಮಠಮಂದಿರಗಳಿಗೆ ದಾನಧರ್ಮ ಮಾಡುವುದು ಸರ್ವ ಶ್ರೇಷ್ಠವಾಗಿದೆ. ಅಂತಹ ಮನೋಭಾವನೆಗಳು ಎಲ್ಲ ಭಕ್ತರಲ್ಲಿ ಮೂಡಬೇಕು ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ನರಸೀಪುರದಲ್ಲಿ ನಡೆಯುವ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವದ ಅನ್ನದಾಸೋಹಕ್ಕಾಗಿ ತಾಲ್ಲೂಕಿನ ಭಕ್ತರಿಂದ ಸಂಗ್ರಹಿಸಿದ ದವಸ ಧಾನ್ಯಗಳನ್ನು ಮಠಕ್ಕೆ ದಾನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಮಾತನಾಡಿ, ತಾಲ್ಲೂಕಿನ ಸಮಾಜ ಬಾಂಧವರು, ಯಥೇಚ್ಚವಾಗಿ ದವಸಧಾನ್ಯಗಳನ್ನು ಮತ್ತು ಸುಮಾರು 40 ಸಾವಿರ ರೊಟ್ಟಿಗಳನ್ನು ದಾನ ಮಾಡಿ, ರೊಟ್ಟಿ ಜಾತ್ರೆಯ ಮೂಲಕ ಭಕ್ತರಿಗೆ ಅನ್ನ ದಾಸೋಹಕ್ಕೆ ಸಹಕರಿಸಿದ್ದಾರೆ ಎಂದರು.

ADVERTISEMENT

ಮುಖಂಡರಾದ ಈರಣ್ಣ , ನಿಂಗಣ್ಣ ಹೊಸಪೇಟಿ, ನಾಗಪ್ಪ ಓಲೆಕಾರ, ಬಸವರಾಜ ಹುಳ್ಳಿಕೊಪ್ಪಿ, ದೇವರಾಜ ಸುಣಗಾರ,  ರುದ್ರಣ್ಣ ಬಂಕಾಪುರ, ರಾಮಣ್ಣ ಅಂದಲಗಿ, ಗುಡ್ಡಪ್ಪ ಸುಣಗಾರ, ಚನ್ನಬಸಪ್ಪ ಅತ್ತಿಗೇರಿ, ನಿಂಗಣ್ಣ ಅತ್ತಿಗೇರಿ, ಗಿರೀಶ ಕರ್ಜಗಿ, ಆನಂದ ಹಾಳಿ, ಅಣ್ಣಪ್ಪ, ಚಂದ್ರು ಹಾಳಿ, ಮುತ್ತು ಕಟ್ಟಿಮನಿ, ಮಲ್ಲೇಶಪ್ಪ ಹುಬ್ಬಳ್ಳಿ, ಉಡಚಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.