ADVERTISEMENT

ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 9:07 IST
Last Updated 29 ಸೆಪ್ಟೆಂಬರ್ 2022, 9:07 IST
ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ
ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ   

ಹಾವೇರಿ:ದೇಶದಲ್ಲಿ ಹಲವು ಬದಲಾವಣೆಗಳು ಆದಾಗ ಸಾಹಿತಿಗಳು ಪರ ಹಾಗೂ ವಿರೋಧಎರಡೂ ಕಡೆ ಇದ್ದಾರೆ. ಕೆಲವು ವಿಚಾರದಲ್ಲಿ ಅಲ್ಲೂ ಬೆಂಬಲ ಮಾಡ್ತಾರೆ‌. ಕೆಲವು ವಿಚಾರದಲ್ಲಿ ಇಲ್ಲಿಯೂ ಬೆಂಬಲ ನೀಡ್ತಾರೆ. ಭಾರತ್ ಜೋಡೋ ಯಾರ್ ಮಾಡ್ತಿದ್ದಾರೆ. ಭಾರತ್ ಥೋಡೋ ಯಾರ್ ಮಾಡ್ತಿದ್ದಾರೆ ಜನಕ್ಕೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಪಿ ಎಫ್ ಐ ಈಗಾಗಲೇ ಬ್ಯಾನ್ ಆಗಿದೆ. ಎಲ್ಲರಿಗೂ ಗೊತ್ತಿರುವ ವಿಚಾರ. ಹಲವಾರು ಬಾರಿ ರೂಪಾಂತರವಾಯಿತು. ಮೊದಲು ಸಿಮಿ ಇತ್ತು. ಸಿಮಿಯಿಂದ ಕೆ ಎಫ್ ಡಿ ಆಯಿತು, ಕೆ ಎಫ್ ಡಿ ಯಿಂದ ಪಿ ಎಫ್ ಐ ಆಯಿತು‌. ಎಸ್ ಡಿ ಪಿ ಐ ನೋಂದಾಯಿತ ಪೊಲಿಟಿಕಲ್ ಪಾರ್ಟಿ. ಹೀಗಾಗಿ ಅದರ ಬಗ್ಗೆ, ಬೇರೆ ರೀತಿಯ ಕಾನೂನು ಇವೆ‌. ಸರ್ಕಾರ ಈಗ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ. ಮಂಬರುವ ದಿನಗಳಲ್ಲಿ ಅದರ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಕೇಂದ್ರ ಅದರದೇ ಆದ ಕಾನೂನುಗಳ ಮುಂದಿಟ್ಟುಕೊಂಡು ಸರ್ಕಾರ ನಿರ್ಧಾರ ಮಾಡುತ್ತದೆ ಎಂದರು.

ADVERTISEMENT

ಪಿ.ಎಫ್ ಐ ಬ್ಯಾನ್ ಪೊಲಿಟಿಕಲ್ ಗಿಮಿಕ್ ಎಂಬ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹರಿಪ್ರಸಾದರಿಂದ ಏನೂ ನಿರೀಕ್ಷೆ ಮಾಡೋಕೆ ಆಗಲ್ಲ. ಹಿಂದೆ ಪಿ.ಎಫ್ ಐ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದಾಗ, ಇದೇ ಕಾಂಗ್ರೆಸ್ ನವರು ಬ್ಯಾನ್ ಮಾಡಿ , ಬ್ಯಾನ್ ಮಾಡಿ ಅಂತ ಅಸೆಂಬ್ಲಿಯಲ್ಲಿ ಕೂಗಾಡಿದ್ರು.ಈಗ ಪಿ.ಎಫ್.ಐ ಬ್ಯಾನ್ ಮಾಡಿದ ಮೇಲೆಎಲೆಕ್ಷನ್ ಗಿಮಿಕ್ ಅನ್ನೋದು ಎಷ್ಟು ಸರಿ? ಎಂದು ತಿರುಗೇಟು ನೀಡಿದರು.‌

ಜೋಡೋ ಯಾತ್ರೆಯ ಪ್ಲೆಕ್ಸ್ ಗಳನ್ನು ಬಿಜೆಪಿಯವರು ಹರಿದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಮಾಡಿರುವ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ಸಿಎಂ ಅವರು, ಡಿಕೆಶಿ ಹೇಳಲಿ ಬಿಡಲಿ, ಮೊದಲನೆಯದಾಗಿ ಪರ್ಮಿಶನ್ ತಗೊಂಡು ಫ್ಲೆಕ್ಸ್ ಹಾಕಬೇಕು. ಪರ್ಮಿಶನ್ ತಗೊಂಡಿದ್ರಾ? ಇಲ್ಲವಾ ನನಗೆ ಮಾಹಿತಿ ಇಲ್ಲ.ಯಾವ ಪಕ್ಷಕ್ಕೂ ಫ್ಲೆಕ್ಸ್ ಹರಿಯುವಂತ ಅವಶ್ಯವಿಲ್ಲ. ಭಾರತ ಜೋಡೋ ಯಾತ್ರೆ ಫ್ಲೆಕ್ಸ್ ಹರಿದ ಬಗ್ಗೆ ಮಾಹಿತಿಯಿಲ್ಲ ಎಂದರು.

ನಾನು ಇವತ್ತು ಹಾವೇರಿ ಜಿಲ್ಲೆಗೆ ಮೆಗಾ ಡೇರಿಅಡಿಗಲ್ಲು ಸಮಾರಂಭ ಹಾಗೂ ಕಚೇರಿ ಉದ್ಘಾಟನೆ ಮಾಡಲು ಆಗಮಿಸಿರುವೆ. ಹಾಲು ಉತ್ಪಾದನೆ ಮತ್ತು ಉತ್ಪಾದಕರಿಗೆ ಹೆಚ್ಚಿನ ಅನುಕೂಲ ಮಾಡಲು ಎರಡು ಕಾರ್ಯಕ್ರಮವನ್ನು ಬಜೆಟ್ ಘೋಷಣೆ ಮಾಡಿದಂತೆ ಅನುಷ್ಠಾನ ಮಾಡಿದ್ದೇವೆ.‌ ಇದಾದ ಮೇಲೆ ನನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿರುವೆ. ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಏನೆಲ್ಲಾ ಹೇಳಿದ್ದೀನಿ. ಅವುಗಳ ಕಾರ್ಯಾರಂಭ ಮಾಡಲಾಗುತ್ತಿದೆ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.