ADVERTISEMENT

ತಿಳವಳ್ಳಿ ಚೌಡೇಶ್ವರಿ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 13:27 IST
Last Updated 5 ಫೆಬ್ರುವರಿ 2020, 13:27 IST
ತಿಳವಳ್ಳಿಯ ಚೌಡೇಶ್ವರಿ ದೇವಿ ಮಹಾರಥೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು
ತಿಳವಳ್ಳಿಯ ಚೌಡೇಶ್ವರಿ ದೇವಿ ಮಹಾರಥೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು   

ತಿಳವಳ್ಳಿ: ಗ್ರಾಮದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ರಥೋತ್ಸವವು ಭಕ್ತರ ಜಯಘೋಷದ ನಡುವೆ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ದೇವಿಯ ಮಹಾರಥೋತ್ಸವದಲ್ಲಿ ತಿಳವಳ್ಳಿ, ಯತ್ತಿನಹಳ್ಳಿ, ಕೊಪ್ಪಗೊಂಡನಕೊಪ್ಪ, ಇನಾಂಲಕ್ಮಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ರಥೋತ್ಸವಕ್ಕೆ ತಿಳವಳ್ಳಿಯ ಮುರುಘರಾಜೇಂದ್ರ ಕಲ್ಮಠದ ಬಸವನಿರಂಜನ ಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದ ವೇಳೆ ಭಕ್ತಾದಿಗಳು ದೊಡ್ಡ ತೇರಿಗೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಮೆರೆದರು.

ಈ ರಥೋತ್ಸವವು ಡೊಳ್ಳು, ಭಜನೆ, ವಾದ್ಯ, ಸಮ್ಮಾಳ, ಝಾಂಜ್ ಫಥಾಕ್, ಚಂಡಿ ಬಳಗ, ಕುದುರೆ ಕುಣಿತ, ನಂದಿಕೋಲು ಕುಣಿತ ಸೇರಿದಂತೆ ಕಲಾ ತಂಡಗಳೊಂದಿಗೆ ಚೌಡೇಶ್ವರಿ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾದು ಹರ್ಡೀಕರ್ ವೃತ್ತದ ಮೂಲಕ ಮರಳಿ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿತು. ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ ನಡೆಯಿತು.

ADVERTISEMENT

ಜಾತ್ರಾ ವಿಶೇಷತೆ: ಸಾಮಾನ್ಯವಾಗಿ ಎಲ್ಲಾ ಜಾತ್ರೆಗಳಲ್ಲಿ ತೇರನ್ನು ಹಗ್ಗದ ಸಹಾಯದಿಂದ ಎಳೆಯುತ್ತಾರೆ. ಆದರೆ ತಿಳವಳ್ಳಿಯ ಚೌಡೇಶ್ವರಿ ದೇವಿಯ 11 ಅಂಕಣದ ತೇರನ್ನು ಗ್ರಾಮಸ್ಥರು ಗಾಲಿಗಳನ್ನು ಕೈಗಳ ಮೂಲಕವೇ ಉರುಳಿಸಿ ಎಳೆಯುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.