ADVERTISEMENT

ತಿಳವಳ್ಳಿ| ಕುಸ್ತಿ ಪಂದ್ಯಾವಳಿ: ರೋಷನ್‌ ಗೆಲುವು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:18 IST
Last Updated 3 ಫೆಬ್ರುವರಿ 2026, 6:18 IST
ತಿಳವಳ್ಳಿಯ ಚೌಡೇಶ್ವರಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಕುಸ್ತಿ ಪಂದ್ಯಾವಳಿ ನಡೆಯಿತು 
ತಿಳವಳ್ಳಿಯ ಚೌಡೇಶ್ವರಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಕುಸ್ತಿ ಪಂದ್ಯಾವಳಿ ನಡೆಯಿತು    

ತಿಳವಳ್ಳಿ: ಇಲ್ಲಿಯ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಜಾತ್ರಾ ಸಮಿತಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ನಡೆಯಿತು.

ತಿಳವಳ್ಳಿ ಸೇರಿದಂತೆ ದಾವಣಗೆರೆ, ತುಮಕೂರು, ರಾಣೆಬೆನ್ನೂರ, ಕಪ್ಪನಳ್ಳಿ, ಮಾಸೂರು, ಬೀರನಕೋಪ್ಪ, ಕೊಟ್ಟ, ಯಳವಟ್ಟಿ, ಕೊಲ್ಲಾಪೂರ, ಹರಿಹರ, ಮಡ್ಲೂರ, ಭದ್ರಾವತಿ, ಬಾಗಲಕೋಟೆ, ಬಿಜಾಪೂರ, ಧಾರವಾಡ, ಬೆಳಗಾವಿ, ಶಿಕಾರಿಪುರ, ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳ ಕುಸ್ತಿಪಟುಗಳು ಪಂದ್ಯಾದಲ್ಲಿ ಭಾಗವಹಿಸಿದ್ದರು.

ಮಾಸೂರಿನ ರೋಷನ್ ಹಾಗೂ ಹರಿಹರದ ಮಂಜುನಾಥ ಮಧ್ಯದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಷನ್ ಗೆಲವು ಸಾಧಿಸಿ ನಗದು ಬಹುಮಾನ ಹಾಗೂ ಬೆಳ್ಳಿ ಖಡ್ಗ ಪಡೆದರು. 

ADVERTISEMENT

ಜಾತ್ರಾ ಸಮಿತಿ ಅಧ್ಯಕ್ಷ ರಾಜಪ್ಪ ವಿಠೋಜಿ, ಕಾರ್ಯದರ್ಶಿ ಷಣ್ಮುಖಪ್ಪ ಯಲಿ, ರುದ್ರಪ್ಪ ಯತ್ತಿನಹಳ್ಳಿ, ಗಿರೀಶ ಸಜ್ಜನಶೇಟ್ರ, ಪರಶುರಾಮ ಗೌಳಿ, ರಾಮಣ್ಣ ನರಸೋಜಿ, ಶಾಂತಪ್ಪ ಪೂಜಾರ, ರವಿ ಗೌಳಿ ಇದ್ದರು.

ತಿಳವಳ್ಳಿಯ ಚೌಡೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿ ನೋಡುಗರನ್ನು ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.