ADVERTISEMENT

ತಿಳವಳ್ಳಿ: ದೇಶದ ಅಭಿವೃದ್ಧಿಗೆ ಕೈ ಜೋಡಿಸಿ: ಕುಮಾರ ಲಕ್ಮೋಜಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 6:14 IST
Last Updated 27 ಜನವರಿ 2026, 6:14 IST
ತಿಳವಳ್ಳಿಯ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕುಮಾರ ಲಕ್ಮೋಜಿ ಉದ್ಘಾಟಿಸಿದರು
ತಿಳವಳ್ಳಿಯ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕುಮಾರ ಲಕ್ಮೋಜಿ ಉದ್ಘಾಟಿಸಿದರು   

ತಿಳವಳ್ಳಿ: ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಿ ದೇಶದ ಅಭಿವೃದ್ಧಿಯಲ್ಲಿ ನಾಗರಿಕರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, 77 ವರ್ಷಗಳಲ್ಲಿ ದೇಶ ಸಾಕಷ್ಟು ಮುನ್ನಡೆದಿದೆ ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕುಮಾರ ಲಕ್ಮೋಜಿ ಹೇಳಿದರು.

ಇಲ್ಲಿಯ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಸಮಾರಂಭದವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧಿ, ಅಂಬೇಡ್ಕರ್‌ ಹಾಕಿಕೊಟ್ಟ ಸತ್ಯದ ಮಾರ್ಗದಲ್ಲಿ ನಾವೆಲ್ಲ ದೇಶದ ಅಭಿವೃದ್ಧಿಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು. ‘ದೇಶದ ಸಂವಿಧಾನ ಜಗತ್ತಿನಲ್ಲೇ ವಿಶಿಷ್ಟವಾಗಿದೆ. ಅನೇಕ ಜಾತಿಗಳಿದ್ದರೂ ಏಕತೆಯಿದೆ. ವಿವಿಧ ಧರ್ಮಗಳಿಂದ ಕೂಡಿರುವ ಸೌಹಾರ್ದದ ಪ್ರತೀಕವಾಗಿದೆ’ ಎಂದರು.

ADVERTISEMENT

ಪಿಡಿಒ ಗುಡ್ಡಪ್ಪ ಎಸ್. ಮಾತನಾಡಿ, ‘ಪ್ರತಿಯೊಬ್ಬ ಪ್ರಜೆಯೂ ಧರ್ಮ, ಪ್ರಾಮಾಣಿಕತೆ, ದೇಶಪ್ರೇಮ, ಕರ್ತವ್ಯನಿಷ್ಠೆ, ಸತತ ದುಡಿಮೆ ಹಾಗೂ ಸನ್ನಡತೆಗಳಿಂದ ಪ್ರಯತ್ನ ಮಾಡಿದರೆ ಈ ರಾಷ್ಟ್ರವನ್ನು ಮುಂದುವರಿದ ದೇಶವನ್ನಾಗಿ ರೂಪಿಸಬಹುದು’ ಎಂದರು.

ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿಶ್ವನಾಥ ಎಂ., ಉಸ್ಮಾನಅಲಿ ಚಿತ್ತೇಖಾನ, ರೇಖಾ ಕುರುಬರ, ಕಲ್ಪನಾ ಚಲವಾದಿ, ರಾಜು ಶೇಷಗಿರಿ, ಬಸವರಾಜ ಚೌವ್ಹಾಣ, ಗಿರೀಜಮ್ಮ ತಳವಾರ, ಹುಚ್ಚಪ್ಪ ವಡಿಯರ, ಪ್ರೇಮಾ ನಿಟ್ಟೂರ, ಭಾಗ್ಯಲಕ್ಷ್ಮೀ ಮೇಲಗೀರಿ, ಹನುಮಂತಪ್ಪ ಕಲ್ಲೇರ, ಗಣೇಶಪ್ಪ ಕೋಡಿಹಳ್ಳಿ, ಬಸವರಾಜ ನರೇಂದ್ರ, ಮುನೀರಖಾನ್ ಲಾಲಖಾನವರ, ಭವಾನೇಪ್ಪ ಪವಾರ, ಮಂಜುನಾಥ ಮೇಲಗೇರಿ, ಆಸೀಪಖಾನ್ ಕೂಸನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.