ADVERTISEMENT

ರಾಣೆಬೆನ್ನೂರು: ಗಮನ ಸೆಳೆದ ತಿರುಪತಿ ದೇವಾಲಯ ಅಲಂಕಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 14:11 IST
Last Updated 20 ಸೆಪ್ಟೆಂಬರ್ 2023, 14:11 IST
ರಾಣೆಬೆನ್ನೂರಿನ ಕಾಕಿ ಸಮುದಾಯ ಭವನದಲ್ಲಿ ಕಾಕಿ ಜನಸೇವಾ ಟ್ರಸ್ಟ್‌ನಿಂದ 21 ಅಡಿ ಎತ್ತರದ ಬೃಹತ್‌ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ರಾಣೆಬೆನ್ನೂರಿನ ಕಾಕಿ ಸಮುದಾಯ ಭವನದಲ್ಲಿ ಕಾಕಿ ಜನಸೇವಾ ಟ್ರಸ್ಟ್‌ನಿಂದ 21 ಅಡಿ ಎತ್ತರದ ಬೃಹತ್‌ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ರಾಣೆಬೆನ್ನೂರು: ಇಲ್ಲಿಯ ಸಿದ್ದೇಶ್ವರನಗರದ ಕಾಕಿ ಕಲ್ಯಾಣ ಮಂಟಪದಲ್ಲಿ 21 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಜೊತೆ ನಿರ್ಮಿಸಿರುವ ತಿರುಪತಿ ದೇವಸ್ಥಾನದ ಅಲಂಕಾರ ಗಮನ ಸೆಳೆಯುತ್ತಿದೆ.

ಗಂಗಾಪುರ ರಸ್ತೆಯ ಶನೇಶ್ವರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ್ ಕಾಕಿ ಮಾತನಾಡಿ, ‘ಇಂದಿನಿಂದ 11 ದಿನಗಳ ಕಾಲ ಮಹಾರಾಜ್ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

ಶಿವಾನಂದ ದೇವರಗುಡ್ಡ, ಪ್ರಭುಲಿಂಗಪ್ಪ ಹಲಗೇರಿ, ಆರ್.ಎಸ್. ಪಾಟೀಲ, ಶಿವಾನಂದ ಸಾಲಗೇರಿ, ವೆಂಕಟೇಶ ಕಾಕಿ, ಪ್ರಭುಲಿಂಗಪ್ಪ ಹಲಗೇರಿ, ಪ್ರಕಾಶ ಗಚ್ಚನಿಮಠ, ಪಿ.ವಿ. ಮಠದ, ರವಿಕುಮಾರ ಪಾಟೀಲ, ನಾಗಪ್ಪ ಕಾಕಿ, ಹನುಮಂತಪ್ಪ ಕಾಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.