ತಡಸ: ಪಹಲ್ಗಾಮ್ ದಾಳಿ ಖಂಡಿಸಿ, ಉಗ್ರರ ದಾಳಿಯಿಂದ ಹತ್ಯೆಯಾದವರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣ ವತಿಯಿಂದ ಪಂಜಿನ ಮೆರವಣಿಗೆ ನಡೆಸಿ ತಹಶೀಲ್ದಾರ್ ರವಿ ಕೊರವರ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮದ ಗೇಟ್‌ನಿಂದ ಬಸ್ ನಿಲ್ದಾಣದ ಮುಂಭಾಗದವರೆಗೆ ಅರೆ ಬೆತ್ತಲೆ ಮೆರವಣಿಗೆ ನಡೆಸಿದರು. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ ₹50 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠ, ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಬಡಿಗೇರ, ಜಿಲ್ಲಾಉಪಾಧ್ಯಕ್ಷ ಯಾಸಿಫ್ ಸೈಕಲ್‌ಗಾರ್, ರೇವಣಸಿದ್ದಯ್ಯ ಹಿರೇಮಠ, ರಾಮಣ್ಣ ಕಂಬಾರ, ದೇವಿಂದ್ರ ಹಾನಗಲ್, ಮಹಾವೀರ ಹಳ್ಳಿಯವರ, ನಾಸೀರ್‌ಖಾನ್ ಪಠಾಣ, ಕರವೇ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.