
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ರಾಣೆಬೆನ್ನೂರು: ತಾಲ್ಲೂಕಿನ ಚಳಗೇರಿ ಎನ್‌ಎಚ್. 48 ಸರ್ವಿಸ್ ರಸ್ತೆಯ ಬಳಿ ಹಂಪ್ಸ್ ಕರ್ಲಗೇರಿಯ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷತನದಿಂದ ಟ್ರ್ಯಾಕ್ಟರ್ ಬಲಭಾಗದ ಗಾಲಿಯ ಹಬ್ ಕಟ್ ಆಗಿ, ಕಾಲುವೆಗೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಕರ್ಲಗೇರಿಯ ಮಂಜಪ್ಪ ಕೊಟ್ರಪ್ಪ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಟ್ರ್ಯಾಕ್ಟರ್ ಚಾಲಕ ಕೊಟ್ರಪ್ಪ ಗುಡ್ಡಪ್ಪ ಗೊಲ್ಲರ ಪುಟಿದು ಕೆಳಗೆ ಬಿದ್ದಿದ್ದರಿಂದ ತಲೆಗೆ ಗಾಯಗಳಾಗಿವೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.