
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ಗುತ್ತಲ: ಇಲ್ಲಿಗೆ ಸಮೀಪದ ಹಾವನೂರ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಗುರುವಾರ ಅನಾಥ ಮಹಿಳೆಯ ಶವ ಪತ್ತೆಯಾಗಿದೆ. ಮೀನುಗಾರರು ಶವವನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ. ನದಿಯ ಮಧ್ಯದಲ್ಲಿ ಇರುವ ಶವವನ್ನು ಮೀನುಗಾರರು ದಡಕ್ಕೆ ತಂದಿದ್ದಾರೆ.
ವಿಜಯನಗರ ಮತ್ತು ಹಾವೇರಿ ಜೆಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿಂದ ಮಹಿಳೆಯ ಕೈಗಳನ್ನು ಬಟ್ಟೆಯಿಂದ ಕಟ್ಟಿ ನದಿಗೆ ಎಸೆದು ಕೊಲೆ ಮಾಡಿರುವ ಶಂಕೆಯಾಗಿದೆ.
ಮೀನುಗಾರರು ದಡಕ್ಕೆ ತಂದ ಸಂದರ್ಭದಲ್ಲಿ ಶವದ ಕೈಗಳನ್ನು ಬಟ್ಟೆಯಿಂದ ಕಟ್ಟಲಾಗಿತ್ತು. ಕೇಸರಿ ಬಣ್ಣದ ಸೀರೆಯಲ್ಲಿ ಹೂವುಗಳು ಇರುವ ಚಿತ್ರದ ಸೀರೆ, ಕೆಂಪು ಬಣ್ಣದ ರವಿಕೆ, ಕೊರಳಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಹವಳದ ಸರ ಶವದ ಮೇಲಿತ್ತು. ಕಪ್ಪು ಬಣ್ಣದ ಮುಖ ಚಹರೆವುಳ್ಳ ಶವ ಇದಾಗಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.