ADVERTISEMENT

ಶಿಗ್ಗಾವಿ | ನಿಷ್ಠೆಯಿಂದ ಕಾಯಕ ಕೈಗೊಳ್ಳಿ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕರೆ

ಶಿಗ್ಗಾವಿ ಅರ್ಬನ್ ಬ್ಯಾಂಕ್‌ ರಜತ ಮಹೋತ್ಸವ ಸಮಾರಂಭದಲ್ಲಿ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:42 IST
Last Updated 16 ಸೆಪ್ಟೆಂಬರ್ 2025, 2:42 IST
<div class="paragraphs"><p><strong>ಶಿಗ್ಗಾವಿ ಪಟ್ಟಣದ ಹನುಮಂತಗೌಡ್ರ ಪಾಟೀಲ ಕಲ್ಯಾಣ ಭವನದಲ್ಲಿ ಸೋಮವಾರ ನಡೆದ ಶಿಗ್ಗಾವಿ ಅರ್ಬನ್ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭವನ್ನು ಕೊಲ್ಲಾಪುರ ಕನ್ನೇರಿ ಸಿದ್ದಗಿರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.</strong></p></div>

ಶಿಗ್ಗಾವಿ ಪಟ್ಟಣದ ಹನುಮಂತಗೌಡ್ರ ಪಾಟೀಲ ಕಲ್ಯಾಣ ಭವನದಲ್ಲಿ ಸೋಮವಾರ ನಡೆದ ಶಿಗ್ಗಾವಿ ಅರ್ಬನ್ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭವನ್ನು ಕೊಲ್ಲಾಪುರ ಕನ್ನೇರಿ ಸಿದ್ದಗಿರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

   

ಶಿಗ್ಗಾವಿ: ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ಕಾಯಕ ಮಾಡಿದರೆ ಅದರ ಫಲ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕೊಲ್ಹಾಪುರ ಕನೇರಿ ಸಿದ್ದಗಿರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಹನುಮಂತಗೌಡ್ರ ಪಾಟೀಲ ಕಲ್ಯಾಣ ಭವನದಲ್ಲಿ ಸೋಮವಾರ ನಡೆದ ಶಿಗ್ಗಾವಿ ಅರ್ಬನ್ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ADVERTISEMENT

ಬದುಕು ಸಾಗಿಸುವಷ್ಟು ಹಣ, ಆಸ್ತಿ ಇದ್ದರೆ ಸಾಕು ಎಂಬ ಮನೋಭಾವ ಬೆಳಸಿಕೊಳ್ಳಬೇಕು. ದುರಾಸೆ ಪಡಬಾರದು ಎಂದರು.

ಶಿಗ್ಗಾವಿ ಅರ್ಬನ್ ಬ್ಯಾಂಕ್ ಸಣ್ಣ ಬಂಡವಾಳದಲ್ಲಿ ಆರಂಭವಾಗಿ ಇಂದು ಬೃಹದಾಕಾರವಾಗಿ   ಬೆಳೆದಿದೆ. ಅದಕ್ಕೆ ಸಿಬ್ಬಂದಿಯ ಪ್ರಾಮಾಣಿಕ ಸೇವೆಯೇ ಕಾರಣವಾಗಿದೆ. ಹಣ ಗಳಿಸುವ ಜತೆಗೆ ಸಾವಿರಾರು ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರಭುಗೌಡ ಪಾಟೀಲ, ಅಕ್ಕಿಆಲೂರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಎಸ್.ಮುಚ್ಚಂಡಿ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಸಂಸ್ಥಾಕ ನಿರ್ದೇಶಕ ಎಚ್.ಆರ್.ದುಂಡಿಗೌಡ್ರ, ರೇಣುಕಾ ಚಾರ್ಯ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಸ್.ಅರಳೆಲೆಮಠ, ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಗದೀಶ ತೊಂಡಿಹಾಳ ಅಧ್ಯಕ್ಷತೆ ವಹಿಸಿದ್ದರು.

ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಂಜೀಗಟ್ಟಿ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪುರಸಭೆ ಅಧ್ಯಕ್ಷ ಸಿದಾರ್ಥಗೌಡ ಪಾಟೀಲ, ಬ್ಯಾಂಕಿನ ಉಪಾಧ್ಯಕ್ಷ ಅಶೋಕ ಬಂಕಾಪುರ, ನಿರ್ದೇಶಕರಾದ ಜನಾರ್ಧನ ಬ್ರಹ್ಮಾವರ, ಟಿ.ವಿ.ಸುರಗೀಮಠ, ಕುಮಾರ ಹೆಸರೂರ, ಉಮೇಶ ಗೌಳಿ, ಚಿದಾನಂದ ಕಮ್ಮಾರ, ಮಾಲತೇಶ ಗೌಳಿ, ಧರ್ಮಪ್ಪ ಧಾರವಾಡ, ಡಾ.ಬಿ.ಎಚ್.ವೀರಣ್ಣ, ಧೀರೇಂದ್ರ ಕುಂದಾಪುರ, ಕಾಶವ್ವ ಹಾವೇರಿ, ಚನ್ನಮ್ಮ ಬಡ್ಡಿ, ಬ್ಯಾಂಕ್‌ ಮ್ಯಾನೇಜರ್ ಶಿವಾನಂದ ಪಾಟೀಲ, ಲೆಕ್ಕಾಧಿಕಾರಿ ಆರ್.ಪಿ.ಹೆಗಡೆ ಸೇರಿದಂತೆ ಬ್ಯಾಂಕಿನ ಎಲ್ಲ ಸದಸ್ಯರು, ಸಿಬ್ಬಂದಿ, ಸುತ್ತಲಿನ ಗ್ರಾಮಗಳ ಗ್ರಾಹಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.