ಗುತ್ತಲ: ಯೂರಿಯಾ ಗೊಬ್ಬರಕ್ಕಾಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಬೀಗ ಹಾಕಿದ ಘಟನೆ ಸಮೀಪದ ಹಾವನೂರ ಗ್ರಾಮದಲ್ಲಿ ಸೊಮವಾರ ನಡೆದಿದೆ
330 ಚೀಲ ಯೂರಿಯಾ ಗೊಬ್ಬರ ಸಂಘಕ್ಕೆ ಬಂದ ಹಿನ್ನಲೆಯಲ್ಲಿ ರೈತರು ಸರದಿಯಲ್ಲಿ ನಿಂತರು. ಒಬ್ಬರಿಗೆ 2 ಚೀಲ ಗೊಬ್ಬರ ನೀಡಲು ಸಂಘದ ಕಾರ್ಯದರ್ಶಿ ಪ್ರಾರಂಭಿಸಿದರು. 2 ಚೀಲಕ್ಕೆ ಒಪ್ಪದ ರೈತರು ‘ಈ ಹಿಂದೆ 5 ರಿಂದ 10 ಚೀಲ ನೀಡಿದ್ದಿರಿ, ಅದೇ ರೀತಿ ನಮಗೆ 5 ರಿಂದ 10 ಚೀಲ ನೀಡುವಂತೆ’ ಹಠ ಹಿಡಿದು ಕುಳಿತರು.
ಸರದಿಯಲ್ಲಿ 400ಕ್ಕೂ ಹೆಚ್ಚು ಜನ ರೈತರಿದ್ದಾರೆ ಎಲ್ಲರಿಗೂ ಗೊಬ್ಬರ ಸಿಗುವದಿಲ್ಲ. ಒಬ್ಬರಿಗೆ 2 ಚೀಲ ಮಾತ್ರ ನೀಡುತ್ತೇನೆ ಎಂದ ತಕ್ಷಣ ಸಂಘದ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮೇಲೆ ರೈತರು ಹಲ್ಲೆಗೆ ಯತ್ನಿಸತೊಡಗಿದರು. ಇದನ್ನು ಕಂಡ ಕೃಷಿ ಸಂಘದ ಸಿಬ್ಬಂದಿ ಕಚೇರಿ ಬಿಟ್ಟು ಹೊರಗೆ ಹೊದರು.
ಸ್ಥಳಕ್ಕೆ ಹೆದ್ದಾರಿ ಗಸ್ತು ವಾಹನ ಸೇರಿದಂತೆ 10ಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂದಿ ಬಂದು ರೈತರನ್ನು ಸರದಿಯಲ್ಲಿ ನಿಂತು ಒಬ್ಬರಿಗೆ ಒಂದು ಚೀಲ ನೀಡಲು ಮುಂದಾದರು. ಪೊಲೀಸ್ ಮತ್ತು ರೈತರ ಮಧ್ಯ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಾತಿಗೆ ಒಪ್ಪದ ರೈತರಲ್ಲಿ ನೂಕುನುಗ್ಗಲು ಪ್ರಾರಂಭವಾಯಿತು. ಒಬ್ಬರಿಗೆ 2 ಚೀಲ ನೀಡಿ ಎಂದು ರೈತರು ಹಠ ಹಿಡಿದು ಸಂಘದ ಕದಹಾಕಿ ಪ್ರತಿಭಟನೆ ಮಾಡತೊಡಗಿದರು.
10 ಗಂಟೆಯಿಂದ ಸರದಿಯಲ್ಲಿ ನಿಂತ ರೈತರು ಮಧ್ಯಾಹ್ನ 3 ಗಂಟೆಯವರೆಗೆ ಸರದಿಯಲ್ಲಿ ನಿಂತರು. ಸ್ಥಳಕ್ಕೆ ಪಿಎಸ್‌ಐ ಬಸವನಗೌಡ ಬಿರಾದಾರ ಬಂದು ‘ಒಬ್ಬರಿಗೆ ಒಂದು ಚೀಲ ಮಾತ್ರ ನೀಡಲಾಗುವುದು’ ಎಂದು ಸಂಘದ ಕಾರ್ಯದರ್ಶಿ ಕರೆತಂದು ಒಬ್ಬರಿಗೆ ಒಂದು ನೀಡಲು ಪ್ರಾರಂಭಿಸಿದರು.ಜಿಟಿಜಿಟಿ ಮಳೆಯಲ್ಲಿ ರೈತರು ಗೊಬ್ಬರ ಪಡೆದರು.
ರೈತರು ಸಹರಿಸಬೇಕು. ಒಬ್ಬರು ಒಂದು ಚೀಲ ಪಡೆದರೆ ಇನ್ನೂ ಕೆಲವೇ ಕೇಲವೆ ದಿನಗಳಲ್ಲಿ ಗೊಬ್ಬರ ಹಾವನೂರ ಗ್ರಾಮಕ್ಕೆ ಗೊಬ್ಬರ ನೀಡಲಾಗುವುದುವೀರಭದ್ರಪ್ಪ.ಬಿ.ಎಚ್ ಸಹಾಯಕ ಕೃಷಿ ನಿರ್ದೇಶಕ ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.