
ಪ್ರಜಾವಾಣಿ ವಾರ್ತೆಬಂಧನ
(ಪ್ರಾತಿನಿಧಿಕ ಚಿತ್ರ)
ಗುತ್ತಲ (ಹಾವೇರಿ ಜಿಲ್ಲೆ): ಸಮೀಪದ ನೆಗಳೂರ ಗ್ರಾಮದಲ್ಲಿ ಗುರುವಾರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಗ್ರಾಮದ ಲೆಕ್ಕಾಧಿಕಾರಿ ಫಕ್ಕಿರೇಶ ಬಾರ್ಕಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
‘ಬಸಾಪುರ ಗ್ರಾಮದ ಕರಿಯಲ್ಲಪ್ಪ ಕೇಸರಳ್ಳಿ ಎಂಬುವರು ಜಮೀನು ಖಾತೆ ಬದಲಾವಣೆಗಾಗಿ ಫಕ್ಕಿರೇಶ ಬಾರ್ಕಿ ಬಳಿ ಅರ್ಜಿ ಸಲ್ಲಿಸಿದ್ದರು. ₹63 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಫಕ್ಕಿರೇಶ, ಆರಂಭದಲ್ಲಿ ₹30 ಸಾವಿರ ಲಂಚ ಪಡೆದಿದ್ದ. ಕೆಲಸ ಮಾಡದೇ ಪುನಃ ₹ 30 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ. ನೊಂದ ಕರಿಯಲ್ಲಪ್ಪ ದೂರು ನೀಡಿದ್ದರು. ₹8,500 ಲಂಚ ಪಡೆಯುತ್ತಿದ್ದ ವೇಳ ಫಕ್ಕಿರೇಶನನ್ನು ಬಂಧಿಸಲಾಗಿದೆ’ ಎಂದು ಲೋಕಾಯಕ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.