
ರಾಣೆಬೆನ್ನೂರು: ‘ಸ್ಪರ್ಧಾತ್ಮಕ ಯುಗದಲ್ಲಿ ಉತಮ ಬದುಕು ಕಟ್ಟಿಕೊಳ್ಳಲು ಮತ್ತು ನೇಕಾರ ಸಮುದಾಯ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಹಾಗೂ ಸಂಘಟನೆ ಬಹಳ ಮುಖ್ಯ. ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಂಘಟನೆ ಪ್ರಮುಖ ಅಸ್ತ್ರವಾಗಿದ್ದು ಸಂಘಟಿತರಾದಾಗ ಮಾತ್ರ ನಮಗೆ ಸೌಲಭ್ಯಗಳು ದೊರಕಲು ಸಾಧ್ಯವಿದೆ’ ಎಂದು ಬೆಂಗಳೂರಿನ ದೇವಾಂಗ ಸಮಾಜದ ರಾಜ್ಯ ಘಟಕದ ಅದ್ಯಕ್ಷ ರವೀಂದ್ರ ಪಿ. ಕಲ್ಬುರ್ಗಿ ಹೇಳಿದರು.
ಇಲ್ಲಿನ ಶಿದ್ದೇಶ್ವರನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಅರಮನೆಯಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಯೋವೃದ್ಧರು, ನಿವೃತ್ತ ನೌಕರರು ಮತ್ತು ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಸರ್ಕಾರಿ ನೌಕರಿಗೆ ಸೇರಿದವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬನಶಂಕರಿಯಲ್ಲಿ ಅಖಿಲ ಭಾರತ ದೇವಾಂಗ ಸಮಾಜದ ಬೃಹತ್ ಸಮಾವೇಶ ಹಾಗೂ ದೇವಾಂಗ ಸಮಾಜದ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸ ಆಚರಿಸಲಾಗುವುದು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಸುರೇಶ ಹುಗ್ಗಿ ಉಪನ್ಯಾಸ ನೀಡಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಹಾಗೂ ಡಾ.ಚಂದ್ರಶೇಖರ ಕೇಲಗಾರ, ರಾಮಕೃಷ್ಣ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಮಾತನಾಡಿದರು. ದೇವಾಂಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಸ್. ಮೈಲಾರ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ದೇವಾಂಗ ಸಮಾಜದ ವತಿಯಿಂದ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಯೋವೃದ್ಧರು, ನಿವೃತ್ತ ನೌಕರರು ಹಾಗೂ ಪ್ರಸಕ್ತ ಸಾಲಿನಲ್ಲಿ ಸೇರ್ಪಡೆಗೊಂಡ ನೂತನ ಸರ್ಕಾರಿ ನೌಕರರನ್ನು ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ದೇವಾಂಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ರಾಜ್ಯ ಕಮಿಟಿ ಸದಸ್ಯರಾದ ಸಂಕಪ್ಪ ಮಾರನಾಳ, ದತ್ತಾತ್ರೆಯ ಕರ್ಜಗಿ, ದೇವೆಂದ್ರಪ್ಪ ರಿತ್ತಿ, ಯೋಗಾನಂದ, ಮಮತಾ ಹುಣಸೀಮರದ, ರಂಗನಾಥ, ರಘು ಕುದರಿ, ಗಾಯತ್ರಿ ಸೂರಿ, ನಾಗರಾಜ ದೇವಾಂಗದ, ಶಂಕರ ಹಳ್ಳಿ, ಗಣೇಶ ಹಾವನೂರ, ವಸಂತ ಕುಂಚೂರ, ಈರನಗೌಡ ಗುಡಿಸಾಗರ, ಲಕ್ಷ್ಮಿಕಾಂತ ಹುಲಗೂರ ಹಾಗೂ ಸವಣೂರು, ಶಿಗ್ಗಾಂವಿ, ರಟ್ಟೀಹಳ್ಳಿ, ಹಾವೇರಿ, ಹಾನಗಲ್ಲ, ತುಮ್ಮಿನಕಟ್ಟಿ, ಕದರಮಂಡಲಗಿ, ಬ್ಯಾಡಗಿ, ಹಾವೇರಿ ಸಮಾಜದವರು ಹಾಗೂ ಮಹಿಳಾ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.