ADVERTISEMENT

ಮಾನವೀಯತೆ ಮೆರೆದ ಜಿ.ಪಂ ಮಾಜಿ ಸದಸ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 11:46 IST
Last Updated 10 ಫೆಬ್ರುವರಿ 2020, 11:46 IST
ಅಕ್ಕಿಆಲೂರಿನಲ್ಲಿ ಡ್ರೋಣ ಕ್ಯಾಮರಾವನ್ನು ಅದರ ಮಾಲೀಕರಿಗೆ ಜಿ.ಪಂ. ಮಾಜಿ ಸದಸ್ಯ ಕೃಷ್ಣ ಈಳಿಗೇರ ಒಪ್ಪಿಸಿದರು
ಅಕ್ಕಿಆಲೂರಿನಲ್ಲಿ ಡ್ರೋಣ ಕ್ಯಾಮರಾವನ್ನು ಅದರ ಮಾಲೀಕರಿಗೆ ಜಿ.ಪಂ. ಮಾಜಿ ಸದಸ್ಯ ಕೃಷ್ಣ ಈಳಿಗೇರ ಒಪ್ಪಿಸಿದರು   

ಅಕ್ಕಿಆಲೂರ: ತಮ್ಮ ತೋಟದಲ್ಲಿ ಸಿಕ್ಕ ₹1.80 ಲಕ್ಷ ಮೌಲ್ಯ ಬೆಲೆಬಾಳುವ ಡ್ರೋಣ್ ಕ್ಯಾಮೆರಾವನ್ನು ಅದರ ಮಾಲೀಕರಿಗೆ ಇಲ್ಲಿನ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣ ಈಳಿಗೇರ ಒಪ್ಪಿಸಿದ್ದಾರೆ.

ಇಲ್ಲಿ ನಡೆದ ಮದುವೆಯೊಂದರಲ್ಲಿ ಚಿತ್ರೀಕರಣಕ್ಕೆ ಮೇಲೆ ಹಾರಿಬಿಟ್ಟ ಸಂದರ್ಭದಲ್ಲಿ ಶಿವಮೊಗ್ಗದ ರೂಪೇಶಕುಮಾರ್ ಎನ್. ಎಂಬುವರಿಗೆ ಸೇರಿದ ಡ್ರೋಣ ಕ್ಯಾಮರಾ ಕಾಣೆಯಾಗಿತ್ತು. ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದರೂ ಕೂಡ ಪ್ರಯೋಜನವಾಗಿರಲಿಲ್ಲ.

ಕೃಷ್ಣ ಈಳಿಗೇರ ತಮ್ಮ ತೋಟಕ್ಕೆ ತೆರಳಿದಾಗ ಅಲ್ಲಿ ಕ್ಯಾಮರಾ ಪತ್ತೆಯಾದಾಗ ಕೂಡಲೇ ಮಾಲೀಕರನ್ನು ಕರೆಸಿ, ಅದನ್ನು ತಲುಪಿಸಿದ್ದಾರೆ. ಪ್ರಮೋದ್ ಸ್ಟುಡಿಯೋದ ಪ್ರಮೋದ್ ದೇಸಾಯಿ, ಪವನ್ ಜಾಬೀನ್, ಆದರ್ಶ ಅಂಕಸಖಾನಿ ಸೇರಿದಂತೆ ಹಲವು ಯುವಕರ ಸಮ್ಮುಖದಲ್ಲಿ ಡ್ರೋಣ ಕ್ಯಾಮೆರಾ ಹಸ್ತಾಂತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.