ADVERTISEMENT

‘ಜಗತ್ತಿಗೆ ಮಾದರಿ ಸಂವಿಧಾನ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 9:53 IST
Last Updated 28 ನವೆಂಬರ್ 2019, 9:53 IST
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಮಂಗಳವಾರ ಸಂವಿಧಾನ ದಿನ ಆಚರಿಸಲಾಯಿತು
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಮಂಗಳವಾರ ಸಂವಿಧಾನ ದಿನ ಆಚರಿಸಲಾಯಿತು   

ಕುಕನೂರು: ‘ಜಗತ್ತಿಗೆ ಮಾದರಿ­ಯಾಗಿರುವ ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪಾತ್ರ ಮಹತ್ವದ್ದು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ತಿಳಿಸಿದರು.

ಇಲ್ಲಿನ ವೀರಭದ್ರಪ್ಪ ವೃತ್ತದಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರದ ಸಮಗ್ರತೆ, ಸಾಮಾಜಿಕ ನ್ಯಾಯ ಹಾಗೂ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ’ ಎಂದರು.

ADVERTISEMENT

ಮುಖಂಡ ಟಿ. ರತ್ನಾಕರ್ ಮಾತನಾಡಿ, ಭಾರತವನ್ನು ಸಾರ್ವ­ಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡುವಲ್ಲಿ ಅಂಬೇಡ್ಕರ್‌ ಅವರ ಮಾತ್ರ ಹಿರಿದಾದದ್ದು ಎಂದರು.

ಅನಿಲ ಆಚಾರ, ಶಿವುಕುಮಾರ ನಾಗಲಾಪುರಮಠ, ಆಜಗೋಳ, ಪರುಶರಾಮ ಸಕ್ರಣ್ಣನವರ, ಶರಣಪ್ಪ ಬಣ್ಣದಭಾವಿ, ಗವಿಶಿದ್ದಪ್ಪ ಸಲವಡಿ, ಶರಣಪ್ಪ ಚಲವಾದಿ, ಜುಂಜಪ್ಪ ಸಾಲ್ಮನಿ, ಲಕ್ಷ್ಮಣ್ಣ ಕಾಳಿ, ಯಮನೂರಪ್ಪ ಗೊರ್ಲೆಕೊಪ್ಪ, ಮಾರುತಿ ಗಾವರಾಳ, ಹನುಮಯ್ಯ ಹಂಪನಾಳ, ನಿಂಗಪ್ಪ ಗೊರ್ಲೆಕೊಪ್ಪ, ಬಸವರಡ್ಡಿ ಬಿಡನಾಳ, ಯಲ್ಲಪ್ಪ ಕಲ್ಮನಿ, ಮಧು ಕಲ್ಮನಿ, ರಮೇಶ ಶಾಸ್ತ್ರಿ, ಗವಿಶಿದ್ದಪ್ಪ ಸಾಲ್ಮನಿ, ರಾಘು ಕಾತರಕಿ, ರಘು ಮಾಳೆಕೊಪ್ಪ, ರಮೇಶ ಮಾಳೆಕೊಪ್ಪ, ಶರಣಪ್ಪ ಕಾಳಿ, ಗುದ್ನೇಶ ಬಂಕದಮನಿ, ಮಾರುತಿ ಬಂಡಾರಿ, ಲಕ್ಷ್ಮಣ್ಣ ಬಾರಿಗಿಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.