ADVERTISEMENT

ಜೇವರ್ಗಿ: ಶಿವಯೋಗಿ ಸಿದ್ಧರಾಮೇಶ್ವರ 846ನೇ ಜಯಂತ್ಯುತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 10:05 IST
Last Updated 5 ಮಾರ್ಚ್ 2018, 10:05 IST

ಜೇವರ್ಗಿ: ತಾಲ್ಲೂಕು ಭೋವಿ ವಡ್ಡರ್ ಸಮಾಜದ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರರ 846ನೇ ಜಯಂತ್ಯುತ್ಸವ ಹಾಗೂ ಜನಜಾಗೃತಿ ಸಮಾವೇಶವನ್ನು ಮಾರ್ಚ್‌ 6ರಂದು ಮಧ್ಯಾಹ್ನ 12.30ಗಂಟೆಗೆ ಪಟ್ಟಣದ ಶಾಸ್ತ್ರಿ ಚೌಕ್ ಬಡಾವಣೆಯ ಸಮಾಜದ ನಿವೇಶನದಲ್ಲಿ ಆಯೋಜಿಸಲಾಗಿದೆ.

ಚಿತ್ರದುರ್ಗ ಭೋವಿ ಗುರು ಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಸ್ವಾಮೀಜಿ, ಶಕಾಪುರದ ಸಿದ್ಧರಾಮ ಶಿವಾಚಾರ್ಯ, ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಮಸಕನಳ್ಳಿಯ ಮಾರುತಿ ತಾತನವರು ಸಾನಿಧ್ಯ ವಹಿಸಲಿದ್ದಾರೆ. ಕಲಬುರ್ಗಿ ಶರಣಬಸವೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಭಾಗ್ಯಾ ಅವರು ಶಿವಯೋಗಿ ಸಿದ್ಧರಾಮೇಶ್ವರರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಲಿ ದ್ದಾರೆ. ಶಾಸಕ ಡಾ.ಅಜಯಸಿಂಗ್ ಜಯಂತ್ಯುತ್ಸವ ಉದ್ಘಾಟಿಸಲಿದ್ದು, ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಜಿ ಸಚಿವ ಸುನಿಲ್ ವಲ್ಯಾಪುರೆ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಲ್ಲಮಪ್ರಭು ಪಾಟೀಲ್, ಶಾಸಕ ಬಿ.ಜಿ.ಪಾಟೀಲ್, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ವೈನ್ ಬೋರ್ಡ್ ನಿರ್ದೇಶಕ ಚಂದ್ರಶೇಖರ ಹರನಾಳ ಭಾಗವಹಿಸಲಿದ್ದಾರೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರವಿಚಂದ್ರ ವೈ.ಗುತ್ತೇದಾರ್, ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಗುತ್ತೇದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.