ADVERTISEMENT

ಸಾಮಾಜಿಕ ಜಾಲತಾಣವೇ ಮುಂದೆ

ಚುನಾವಣಾ ನೀತಿ ಸಂಹಿತೆ: ಪ್ರಚಾರ ಸಾಮಗ್ರಿಗಳ ಭರಾಟೆ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 5:58 IST
Last Updated 10 ಏಪ್ರಿಲ್ 2014, 5:58 IST

ಗುಲ್ಬರ್ಗ: 18ನೇ ಲೋಕಸಭಾ ಚುನಾ ವಣೆಗೆ (2 ಉಪ ಚುನಾವಣೆ ಸೇರಿ) ಇನ್ನು 9 ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೂ ಚುನಾವಣೆ ಪ್ರಚಾರದ ಅಬ್ಬರ  ಕಾಣುತ್ತಿಲ್ಲ. ಎಲ್ಲ ಪಕ್ಷಗಳಿಗೂ ‘ಮಾದರಿ ನೀತಿ ಸಂಹಿತೆ’ಯ ಬಿಸಿ ತಟ್ಟಿದ್ದು, ಉಮೇದು ವಾರರು ಹೆಚ್ಚಾಗಿ ‘ಪಾದಯಾತ್ರೆ’, ‘ಮನೆ ಮನೆ ಭೇಟಿ’ಯನ್ನೇ ನಂಬಿಕೊಂಡಿದ್ದಾರೆ.

ಅದು 2004ನೇ ಇಸವಿ. ಲೋಕಸಭಾ ಚುನಾವಣೆ ಪ್ರಚಾರದ ಭರಾಟೆ ಜೋರಾಗಿತ್ತು. ಎಲ್ಲೆಂದರಲ್ಲಿ ಫ್ಲೆಕ್ಸ್, ಬಂಟಿಂಗ್ಸ್, ಕಟೌಟ್, ಬ್ಯಾನರ್ ಹಾಗೂ ಕರಪತ್ರಗಳು ರಾರಾಜಿಸು ತ್ತಿದ್ದವು. ಪಕ್ಷದ ಬಾವುಟಗಳು ನಗರದ ಪ್ರಮುಖ ಬಡಾವಣೆ, ರಸ್ತೆಗಳಲ್ಲಿ ತಿಂಗಳುಗಟ್ಟಲೇ ಹಾರಾಡುತ್ತಿದ್ದವು. ಆದರೆ, ಭಾರತೀಯ ಚುನಾವಣಾ ಆಯೋಗವು ‘ಮಾದರಿ ನೀತಿ ಸಂಹಿತೆ’ಯನ್ನು ಮತ್ತಷ್ಟು ‘ಬಲ’ಗೊ ಳಿಸಲು ಮುಂದಾಯಿತೋ ಪ್ರಚಾರ ಸಾಮಗ್ರಿಗಳ ಭರಾಟೆ, ಮಾರುಕಟ್ಟೆ ಕುಸಿಯಿತು.

ಚುನಾವಣಾ ಆಯೋಗದ ಬಿಗಿ ನಿಯಮದಿಂದಾಗಿ 2009ನೇ ಲೋಕ ಸಭಾ ಚುನಾವಣೆ ಅಬ್ಬರದ ಪ್ರಚಾರ ವಿಲ್ಲದೇ ಮುಗಿದುಹೋಯಿತು. ಅಂತೆಯೇ, ಈಗ ಮತ್ತೊಂದು ಚುನಾವಣೆ ಎದುರಿಗೆ ನಿಂತಿದೆ. ಏ. 17 ರಂದು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳ ರಂಗಿಲ್ಲದೇ ಅಖಾಡ ಸಜ್ಜಾಗಿದೆ.

ಜಾಲತಾಣಗಳ ಮೊರೆ: ಪ್ರಚಾರ ಸಾಮಗ್ರಿಗಳ ಬಳಕೆಗೆ ಚುನಾವಣಾ ಆಯೋಗ ಕಡಿವಾಣ ಹಾಕಿದ್ದೇ ತಡ, ಕಣದಲ್ಲಿರುವ ಅಭ್ಯರ್ಥಿಗಳು ಸಾಮಾ ಜಿಕ ಜಾಲತಾಣಗಳ (ನವಮಾಧ್ಯಮ) ಮೊರೆ ಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿ ರುವ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯಲು ಅಭ್ಯರ್ಥಿಗಳು ‘ಯುಟ್ಯೂಬ್‌’, ‘ಫೆೀಸ್‌ಬುಕ್‌’ ಹಾಗೂ ‘ಟ್ವಿಟರ್‌’ಗಳ ಮೊರೆ ಹೋಗಿದ್ದಾರೆ.

ಅಂತೆಯೇ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಪಕ್ಷಗಳ ಮುಖಂಡರು ನಡೆಸುವ ರ್‍ಯಾಲಿ ಹಾಗೂ ರೋಡ್‌ ಷೋಗಳ ‘ದೃಶ್ಯಾವಳಿ’ಗಳು ಕೆಲವೇ ನಿಮಿಷ   ಗಳಲ್ಲಿ ‘ಯು ಟ್ಯೂಬ್‌’ನಲ್ಲಿ ‘ಅಪ್‌ ಲೋಡ್‌’ ಆಗುತ್ತಿರುವುದನ್ನು ಕಾಣಬ ಹುದು. ‘ಚಾಯ್‌ ಪೇ ಚರ್ಚಾ’ಗೆ ಟ್ವಿಟರ್‌ನಲ್ಲಿ ಕಾಮೆಂಟ್‌ಗಳು ಹರಿದು ಬರುತ್ತಿವೆ. ಬದಲಾದ ಚುನಾವಣಾ ಮಾದರಿ ನೀತಿ ಸಂಹಿತೆಯು ರಾಜಕೀಯ ಪಕ್ಷಗಳಿಗೆ ಮೂಗುದಾರ ಹಾಕಿದಂತಾಗಿದೆ.

ವ್ಯಾಪಾರಿಗಳಿಗೆ ನಷ್ಟ: ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಯಿಂದಾಗಿ ಕಲಾವಿದರು, ಪ್ರಚಾರ ಸಾಮಗ್ರಿಗಳನ್ನು ಮಾರಾಟ ಮಾಡು ತ್ತಿದ್ದ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕರಪತ್ರ ಮುದ್ರಿಸುವ ಮುದ್ರಣಾಲಯಗಳ ಮಾಲೀಕರೂ ಆತಂಕಕ್ಕೆ ಒಳಗಾಗಿದ್ದಾರೆ. ಕಟೌಟ್‌, ಬ್ಯಾನರ್‌, ಗೋಡೆ ಬರಹಗಳನ್ನು ಬರೆದು, ಚುನಾವಣೆ ಸಮಯದಲ್ಲಿ ಒಂದಿಷ್ಟು ಹಣವನ್ನು ಜೇಬಿಗಿಳಿಸುತ್ತಿದ್ದ ವೃತ್ತಿಪರ ಕಲಾವಿದರೂ ಖಾಲಿ ಉಳಿಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.