ADVERTISEMENT

ಹೆಲ್ಮೆಟ್ ಧರಿಸಿದ ಸವಾರರಿಗೆ ಲಾಡು!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:32 IST
Last Updated 6 ಡಿಸೆಂಬರ್ 2017, 8:32 IST
ಕಲಬುರ್ಗಿಯಲ್ಲಿ ಹೆಲ್ಮೆಟ್ ಧರಿಸದ ಸವಾರರೊಬ್ಬರಿಗೆ ಬಾಲಕಿಯೊಬ್ಬಳು ತಿಳಿಹೇಳಿದಾಗ ಬೈಕ್ ಸವಾರ ತಪ್ಪಾಯಿತೆಂದು ಕಿವಿಹಿಡಿದುಕೊಂಡರು
ಕಲಬುರ್ಗಿಯಲ್ಲಿ ಹೆಲ್ಮೆಟ್ ಧರಿಸದ ಸವಾರರೊಬ್ಬರಿಗೆ ಬಾಲಕಿಯೊಬ್ಬಳು ತಿಳಿಹೇಳಿದಾಗ ಬೈಕ್ ಸವಾರ ತಪ್ಪಾಯಿತೆಂದು ಕಿವಿಹಿಡಿದುಕೊಂಡರು   

ಕಲಬುರ್ಗಿ: ‘ಹೆಲ್ಮೆಟ್ ಧರಿಸದೆ ಸಂಚರಿಸಬಾರದು. ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದರೆ ಜೀವಹಾನಿ ಸಂಭವಿಸುತ್ತದೆ' ಎಂದು ವಿದ್ಯಾರ್ಥಿನಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ತಿಳಿಹೇಳಿದಾಗ, ಅವರು ತಪ್ಪಾಯಿತು ಎಂದು ಕಿವಿ ಹಿಡಿದುಕೊಂಡು ಕ್ಷಮೆ ಕೋರಿದರು. ಆಗ ಅಲ್ಲಿದ್ದವರೆಲ್ಲ ನಕ್ಕರು.

ನಗರದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಮಂಗಳವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಗರದ ಓಝಾ ಕಾಲೊನಿಯ ವಿವೇಕಾನಂದ ವಿದ್ಯಾ ನಿಕೇತನ ಇಂಗ್ಲಿಷ್‌ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಧರಿಸಿದವರಿಗೆ ವಿದ್ಯಾರ್ಥಿಗಳಿಂದ ಲಾಡು, ಗುಲಾಬಿ ಹೂ ಕೊಡಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಮಕ್ಕಳು, ‘ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ
ಕಾರಿ ಜಯಪ್ರಕಾಶ, ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಅಹಮ್ಮದ್ ಪಟೇಲ್, ಪಿಎಸ್‌ಐ ಭಾರತಿಬಾಯಿ ಧನ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.