ADVERTISEMENT

ಚಿಂಚೋಳಿ: ಒಂದೇ ಮಳೆಗೆ 10 ಕೆರೆಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:15 IST
Last Updated 1 ಸೆಪ್ಟೆಂಬರ್ 2024, 16:15 IST
ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಸಣ್ಣ ನೀರಾವರಿ ಕೆರೆ ತುಂಬಿ ಹರಿಯುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಸಣ್ಣ ನೀರಾವರಿ ಕೆರೆ ತುಂಬಿ ಹರಿಯುತ್ತಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಒಂದೇ ಮಳೆಗೆ 10 ಕೆರೆಗಳು ಭರ್ತಿಯಾಗಿದ್ದು ಹಿಂಗಾರಿನ ಬೇಸಾಯಕ್ಕೆ ಸಹಕಾರಿಯಾಗಿದೆ.

ತಾಲ್ಲೂಕಿನಲ್ಲಿ ಮಳೆಗಾಲ ಪ್ರಾರಂಭವಾಗಿ 3 ತಿಂಗಳು ಗತಿಸಿದರೂ ಕೇವಲ 4 ಕೆರೆಗಳು ಮಾತ್ರ ಭರ್ತಿಯಾಗಿದ್ದವು ಆದರೆ ಶನಿವಾರ ಸುರಿದ ಮಳೆಯಿಂದ ಹೊಸದಾಗಿ 10 ಕೆರೆಗಳು ತುಂಬಿ ಹರಿಯುತ್ತಿವೆ.

ಒಂದೇ ಮಳೆಗೆ ತಾಲ್ಲೂಕಿನ, ಕೋಡ್ಲಿ ಅಲ್ಲಾಪುರ, ಚಿಕ್ಕಲಿಂಗದಳ್ಳಿ, ಖಾನಾಪುರ, ಪಂಗರಗಾ, ದೋಟಿಕೊಳ, ಮುಕರಂಬಾ, ಅಂತಾವರಂ, ಲಿಂಗಾನಗರ, ಧರ್ಮಾಸಾಗರ, ಚಿಂದಾನೂರು, ಯಲಕಪಳ್ಳಿ ಕೆರೆಗಳು ಭರ್ತಿಯಾಗಿವೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಾಜಿ ಜಾಧವ ತಿಳಿಸಿದ್ದಾರೆ.

ADVERTISEMENT

ಹುಲಸಗೂಡ, ಐನಾಪುರ ಹಳೆ ಮತ್ತು ಹೊಸ, ಚಂದನಕೇರಾ ಕೆರೆ ಭರ್ತಿಯಾಗಿದ್ದವು. ಹಸರಗುಂಡಗಿ, ಸಾಲೇಬೀನಹಳ್ಳಿ. ಕೊಳ್ಳೂರು, ತುಮಕುಂಟ, ಹೂಡದಳ್ಳಿ, ಕೆರೆಗಳು ಭರ್ತಿಯ ಅಂಚಿನಲ್ಲಿವೆ.

ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಕೆರೆಗಳಿಂದ ಅಂದಾಜು 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ನೀರಾವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುತ್ತಿವೆ. ಹೀಗಾಗಿ ಕೆರೆಗಳು ಭರ್ತಿಯಾಗಿರುವುದು ಕೃಷಿಕರಲ್ಲಿ ಸಂತಸ ಉಂಟು ಮಾಡಿದೆ ಆದರೆ ಕೆಲವು ಕೆರೆಗಳ ಕಾಲುವೆ ದುರಸ್ತಿಯಂತಹ ನಿರ್ವಹಣೆಯ ಸಮಸ್ಯೆಯಿದೆ.

ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿಯ ಸಣ್ಣ ನೀರಾವರಿ ಕೆರೆ ತುಂಬಿ ಹರಿಯುತ್ತಿರುವುದು
ರಮೇಶ ರಾಠೋಡ್ ರೈತ ಚಿಕ್ಕಲಿಂಗದಳ್ಳಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.