ADVERTISEMENT

ಹಣದಿ ರಸ್ತೆಗಳ ಸುಧಾರಣೆಗೆ ₹25 ಕೋಟಿ

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:37 IST
Last Updated 2 ಡಿಸೆಂಬರ್ 2019, 9:37 IST
ಸೇಡಂ ತಾಲ್ಲೂಕು ಅಳ್ಳೊಳ್ಳಿ ಗ್ರಾಮದಲ್ಲಿ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು
ಸೇಡಂ ತಾಲ್ಲೂಕು ಅಳ್ಳೊಳ್ಳಿ ಗ್ರಾಮದಲ್ಲಿ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು   

ಸೇಡಂ: ಮತಕ್ಷೇತ್ರದ ಸುಮಾರು 100 ಗ್ರಾಮಗಳ ಹಣದಿ ರಸ್ತೆಗಳ ಅಭಿವೃದ್ಧಿಗಾಗಿ ₹ 25 ಕೋಟಿ ಅನುದಾನ ಮೀಸಲು ಇಡಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತದ ಅನುದಾನದ ₹3 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಗುರುವಾರ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಹಣದಿ ರಸ್ತೆ ನಿರ್ಮಿಸುವ ಕುರಿತು ರೈತರು ಬೇಡಿಕೆ ಸಲ್ಲಿಸಿದ್ದರು. ಹೊಲಗಳಿಗೆ ತೆರಳಲು ಅನಾನುಕೂಲ ಆಗುತ್ತಿರುವುದರ ಕುರಿತು ಅಳಲು ತೋಡಿಕೊಂಡಿದ್ದರು. ಅದೆಲ್ಲವನ್ನು ಗಮನಿಸಿ ರೈತರ ಹಿತದೃಷ್ಟಿಯಿಂದ ಹಣದಿ ರಸ್ತೆಗಳ ಸುಧಾರಣೆಗೆ ಮುಂದಾಗಿದ್ದೇವೆ’ ಎಂದರು.

ADVERTISEMENT

‘ಅಳ್ಳೊಳ್ಳಿ ಗ್ರಾಮದಲ್ಲಿರುವ ಕೊತ್ತಲ ಬಸವೇಶ್ವರ ದೇವಾಲಯದ ಅಭಿವೃದ್ಧಿಗೆ ₹5 ಲಕ್ಷ ನೀಡಲಾಗಿದೆ’ ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಕೊಳ್ಳಿ, ಮುಖಂಡ ಪರ್ವತರೆಡ್ಡಿ ಪಾಟೀಲ ನಾಮವಾರ, ಜಿ.ಪಂ ಸದಸ್ಯ ಶರಣು ಮೆಡಿಕಲ್, ಶಿವಲಿಂಗರೆಡ್ಡಿ ಬೆನಕನಹಳ್ಳಿ, ವೆಂಕಟೇಶ ಬೇಕರಿ, ನಾಗೀಂದ್ರಪ್ಪ ಶಿಲಾರಕೋಟ, ಓಂಪ್ರಕಾಶ ಪಾಟೀಲ, ಲಕ್ಷ್ಮಿನಾರಾಯಣ ಚಿಮ್ಮನಚೋಡ್ಕರ್, ಶರಣರಡ್ಡಿ ಹಣಮನಳ್ಳಿ, ಸಿದ್ದು ಅಳ್ಳೊಳ್ಳಿ, ಚಂದ್ರಶೇಖರ ನಾಚವಾರ, ರವಿ ಮರ
ಗೋಳ,ದೇವಿಂದ್ರಪ್ಪ ಕುಂಬಾರ, ಮಲ್ಲಿಕಾರ್ಜುನ ಪಾಟೀಲ, ನರಸಿಂಗ ಜಾ ಧವ, ಶ್ರೀಮಂತ ಆವಂಟಿ, ಅನೀಲ ರನ್ನೆಟ್ಲಾ, ರೇವಣಸಿದ್ದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.