ADVERTISEMENT

ಮಾಶಾಳ: ಪಾಳುಬಿದ್ದ ಕೃಷಿ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 8:57 IST
Last Updated 27 ಜನವರಿ 2018, 8:57 IST

ಅಫಜಲಪುರ: ಕಲಬುರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ 5 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಕೃಷಿ ಮಾರುಕಟ್ಟೆ ಇಂದು ಹಾಳು ಬಿದ್ದು, ಹಂದಿ ನಾಯಿಗಳ ತಾಣವಾಗಿದೆ.

ಮಾಶಾಳ ಗ್ರಾಮದ ರಸ್ತೆ ಬದಿಯಲ್ಲಿಯೇ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಅನಿವಾರ್ಯವಾಗಿ ಬೇರೆ ಸ್ಥಳದಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

‘ಇಂತಹ ಸುಸಜ್ಜಿತ ಕೃಷಿ ಮಾರುಕಟ್ಟೆ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ. ತಾಲ್ಲೂಕಿನಲ್ಲಿಯೇ ಮಾಶಾಳ ದೊಡ್ಡ ಗ್ರಾಮವಾಗಿದ್ದು, ಪಟ್ಟಣ ಪಂಚಾಯಿತಿಯಾಗಿ ಮಾರ್ಪಡುವ ಹಂತದಲ್ಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಹಾಳಾಗಿದೆ’ ಎಂದು ರೈತರು ದೂರುತ್ತಾರೆ.

ADVERTISEMENT

ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಚಂದಪ್ಪ ಹಾವಳಗಿ ಪ್ರತಿಕ್ರಿಯಿಸಿ, ‘ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಅಫಜಲಪುರದಲ್ಲಿಯೇ ಪ್ರತ್ಯೇಕ ರಚನೆಯಾಗಿದ್ದು, ಮಾಶಾಳ ಕೃಷಿ ಮಾರುಕಟ್ಟೆ ಸ್ವಚ್ಛಗೊಳಿಸಿ ಅಲ್ಲಿಯೇ ಸಂತೆ ಹಾಗೂ ಕೃಷಿ ಮಾರುಕಟ್ಟೆ ಮಾಡಬೇಕು. ಸಂಬಂಧಿತರು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.