ADVERTISEMENT

ಸಂಶೋಧನಾ ಕೇಂದ್ರ: ₹4.50 ಕೋಟಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 8:50 IST
Last Updated 12 ಫೆಬ್ರುವರಿ 2018, 8:50 IST

ಚಿತ್ತಾಪುರ: ‘ಸ್ಥಳೀಯ ಕೃಷಿ ಸಂಶೋಧನಾ ಕೇಂದ್ರದ ಸಮಗ್ರ ಅಭಿವೃದ್ಧಿಗೆ ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ಮಾಡಿ ₹4.50 ಕೋಟಿ ಅನುದಾನ ನೀಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ರಾಯಚೂರು ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಹೇಳಿದರು.

ಪಟ್ಟಣದ ಹೊರವಲಯದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಜೋತ್ಪಾದನಾ ತರಬೇತಿ ಮತ್ತು ಕಡಲೆ ತಳಿ (ಜಿಬಿಎಂ-2) ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಗತ್ಯ ಮೂಲಸೌಲಭ್ಯ ಇರಬೇಕು. ಚಿತ್ತಾಪುರ, ಸೇಡಂ, ಚಿಂಚೋಳಿ ತಾಲ್ಲೂಕಿನ ರೈತರಿಗೆ ಈ ಕೇಂದ್ರ ಉಪಯೋಗಕ್ಕೆ ಬರುವಂತೆ ಅಭಿವೃದ್ಧಿ ಮಾಡಬೇಕಿದೆ. ರೈತರಿಗೆ ಹೆಚ್ಚಿನ ಕೃಷಿ ಮಾಹಿತಿ ಕೇಂದ್ರದಿಂದ ದೊರೆಯು ವಂತಾಗಬೇಕು’ ಎಂದರು.

ADVERTISEMENT

‘ಕೃಷಿ ಸಂಶೋಧನಾ ಕೇಂದ್ರದಲ್ಲಿ ನೀರಾವರಿ ಸೌಲಭ್ಯ ಇರಬೇಕು ಹಾಗೂ ರೈತರಿಗೆ ನೀರಾವರಿ ಬೆಳೆಗಳ ಸಮಗ್ರ ಮಾಹಿತಿ ದೊರೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಎಚ್.ಕೆ.ಆರ್.ಡಿ.ಬಿ.ಯಿಂದ ₹1.20 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ವಿಶೇಷ ಅಧಿಕಾರಿ ಬಸವೇಗೌಡ ಮಾತನಾಡಿ, ‘ಕೃಷಿ ಮತ್ತು ನೀರಾವರಿ ಬೆಳೆ ಬೆಳೆಯುವ ಪದ್ಧತಿಯಲ್ಲಿ ಕಡಿಮೆ ಖರ್ಚು ಮಾಡಿ, ಅಧಿಕ ಇಳುವರಿ ಪಡೆಯುವ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದು ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಯಚೂರು ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ.ಸತ್ಯನಾರಾಯಣರಾವ ಮಾತನಾಡಿ ದರು. ಕಲಬುರ್ಗಿ ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಆರ್.ಸಿ.ಗುಂಡಪ್ಪಗೋಳ, ಹಿರಿಯ ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ, ಸಹಾಯಕ ನಿರ್ದೇಶಕ ಬಿ.ಎಸ್.ಲಕ್ಷ್ಮಣ್ ಮೂರ್ತಿ, ವ್ಯವಸ್ಥಾಪಕ ಎಸ್.ಎ.ಚಿಮ್ಮನಚೂಡ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಾಲೇಂದ್ರ ಗುಂಡಪ್ಪ ಉಪಸ್ಥಿತರಿದ್ದರು.

ವಿಜ್ಞಾನಿಗಳಾದ ಡಾ.ಬಾಪುಗೌಡ ದೊಡ್ಮನಿ, ಡಾ.ದಯಾನಂದ ಮಹಾ ಲಿಂಗ, ಡಾ.ಮುನಿಸ್ವಾಮಿ, ಡಾ.ಲಕ್ಷ್ಮಣ್ ಚಿಂಚೋಳಿ, ಡಾ.ವೈ.ಲೋಕೇಶ ರೈತರಿಗೆ ಕೃಷಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.