ADVERTISEMENT

ಕಲಬುರ್ಗಿಗೆ ಬಂದಿಳಿದ ಕೇಂದ್ರ ಪ್ರವಾಹ ಅಧ್ಯಯನ ತಂಡ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 6:22 IST
Last Updated 14 ಡಿಸೆಂಬರ್ 2020, 6:22 IST
ಕೇಂದ್ರ ಪ್ರವಾಹ ಅಧ್ಯಯನ ತಂಡ
ಕೇಂದ್ರ ಪ್ರವಾಹ ಅಧ್ಯಯನ ತಂಡ   

ಕಲಬುರ್ಗಿ: ಕಳೆದ ಅಕ್ಟೋಬರ್ ನಲ್ಲಿ ಸುರಿದ ವ್ಯಾಪಕ ಮಳೆ ಹಾಗೂ ಭೀಮಾ, ಕಾಗಿಣಾ ನದಿಗಳ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಬೆಳೆಗಳ ಪರಿಶೀಲನೆ ನಡೆಸಲು ಕೇಂದ್ರದ ತಂಡ ನಗರಕ್ಕೆ ಬಂದಿಳಿದಿದೆ.

ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ವಿಪತ್ತು ‌ನಿರ್ವಹಣಾ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ರಮೇಶಕುಮಾರ ಘಂಟಾ ನೇತೃತ್ವದ ದ್ವಿಸದಸ್ಯ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರತೇಂದು ಕುಮಾರ್ ಸಿಂಗ್ ಇದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಂಡದಲ್ಲಿದ್ದು, ಜಿಲ್ಲಾಧಿಕಾರಿ ‌ಕಚೇರಿಯಲ್ಲಿ‌ ಸಭೆ ನಡೆಸಿತು.

ಸಭೆ ಬಳಿಕ ಕಲಬುರ್ಗಿ, ಅಫಜಲಪುರ, ಜೇವರ್ಗಿ ‌ತಾಲ್ಲೂಕಿನ ಹಲವೆಡೆ ಪ್ರವಾಹ ಅಧ್ಯಯನ ‌ನಡೆಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.