ADVERTISEMENT

‘ಎನ್‌ಎಸ್‌ಎಸ್‌ ಶಿಬಿರದಿಂದ ಸಾಕಷ್ಟು ಅನುಕೂಲ’

ಲಾಹೋಟಿ ಕಾನೂನು ಕಾಲೇಜು ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 16:02 IST
Last Updated 2 ಆಗಸ್ಟ್ 2024, 16:02 IST
ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಚಿನ್ನದಕಂತಿ ಚಿಕ್ಕ ವೀರೇಶ್ವರ ಹಿರೇಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಒಂದು ದಿನದ ಎನ್‌ಎಸ್‌ಎಸ್‌ ಕಾರ್ಯ ಶಿಬಿರ ಸಮಾರೋಪವನ್ನು ರೇವಣಸಿದ್ದೇಶ್ವರ ಸ್ವಾಮೀಜಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು
ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಚಿನ್ನದಕಂತಿ ಚಿಕ್ಕ ವೀರೇಶ್ವರ ಹಿರೇಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಒಂದು ದಿನದ ಎನ್‌ಎಸ್‌ಎಸ್‌ ಕಾರ್ಯ ಶಿಬಿರ ಸಮಾರೋಪವನ್ನು ರೇವಣಸಿದ್ದೇಶ್ವರ ಸ್ವಾಮೀಜಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು   

ಕಲಬುರಗಿ: ‘ಕಾನೂನು ವಿದ್ಯಾರ್ಥಿಗಳ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಕಾನೂನು ವಿದ್ಯಾರ್ಥಿಗಳಿಂದ ಬಹಳಷ್ಟು ಜನರು ಒಳಿತನ್ನು ನಿರೀಕ್ಷೆ ಮಾಡ್ತಿರುತ್ತಾರೆ. ಎನ್‌ಎಸ್‌ಎಸ್‌ನಂತ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವುದರಿಂದ ಸಾಕಷ್ಟು ಅನುಕೂಲಗಳಾಗುತ್ತವೆ’ ಎಂದು ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ಶ್ರೀನಿವಾಸ ಸರಡಗಿ ಗ್ರಾಮದ ಚಿನ್ನದಕಂತಿ ಚಿಕ್ಕವೀರೇಶ್ವರ ಹಿರೇಮಠದ ಆವರಣದಲ್ಲಿ ಎಚ್‌ಕೆಇ ಸಂಸ್ಥೆಯ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜು ವಿದ್ಯಾರ್ಥಿಗಳಿಂದ ಶುಕ್ರವಾರ ಹಮ್ಮಿಕೊಂಡ ಒಂದು ದಿನದ ಎನ್‌ಎಸ್‌ಎಸ್‌ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಜನರಿಗೆ ಪರಿಸರ, ಕಾನೂನಿನ ಅರಿವು ಮೂಡಿಸುವುದು ಬಹಳ ಮುಖ್ಯ. ಇಂತಹ ಶಿಬಿರಗಳನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸಗಳನ್ನು ಕಾನೂನು ವಿದ್ಯಾರ್ಥಿಗಳು ಮಾಡಬೇಕು’ ಎಂದು ಹೇಳಿದರು.

ADVERTISEMENT

ಎನ್ಎಸ್‌ಎಸ್ ಅಧಿಕಾರಿ ಜ್ಯೋತಿ ಕಡಾದಿ ಮಾತನಾಡಿದರು. ಉಪನ್ಯಾಸಕಿ ಕರುಣಾ ಪಾಟೀಲ, ಗ್ರಾಮದ ಮುಖಂಡರಾದ ಸಂಗಯ್ಯಸ್ವಾಮಿ ಹಿರೇಮಠ, ಶರಣಗೌಡ ಬಿರಾದಾರ, ಅಯ್ಯಣ್ಣ ಪಾಮನಕಲ್ಲೂರ ಇತರರಿದ್ದರು.

ವಿದ್ಯಾರ್ಥಿನಿ ಗೀತಾಶ್ರೀ ಪ್ರಾರ್ಥಿಸಿದರೆ, ಭಾಗ್ಯಶ್ರೀ ಸ್ವಾಗತಿಸಿದರು. ಅಮರೇಶ್ ನಿರೂಪಿಸಿದರೆ, ಆಶೀಸ್ ಕುಮಾರ್ ವಂದಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿ, ಸಸಿ ನಾಟಿ ಮಾಡುವ ಮೂಲಕ ಶ್ರಮದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.