ADVERTISEMENT

ನಿವೃತ್ತ ಉಪನ್ಯಾಸಕಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:53 IST
Last Updated 8 ಜೂನ್ 2025, 15:53 IST
ಅಫಜಲಪುರ ಪಟ್ಟಣದಲ್ಲಿ ನಿವೃತ್ತ ಉಪನ್ಯಾಸಕ ಸುರೇಶ್ ಗಣಿಯಾ ಅವರ ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು
ಅಫಜಲಪುರ ಪಟ್ಟಣದಲ್ಲಿ ನಿವೃತ್ತ ಉಪನ್ಯಾಸಕ ಸುರೇಶ್ ಗಣಿಯಾ ಅವರ ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು   

ಅಫಜಲಪುರ: ‘ಸುರೇಶ್ ಗಣಿಯಾರ ಅವರು ಪಟ್ಟಣದ ಮಹಾಂತಮ್ಮ ಪಾಟೀಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 30 ವರ್ಷದಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಬಡತನದಲ್ಲಿಯೇ ಶಿಕ್ಷಣ ಮುಗಿಸಿ ಕಷ್ಟಪಟ್ಟು ಗುರಿ ಮುಟ್ಟಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಲಿ’ ಎಂದು ಸಾಹಿತಿ ಡಿ.ಎಂ. ನದಾಫ್ ಹಾರೈಸಿದರು.

ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಸುರೇಶ್ ಗಣಿಯಾರ ಅವರ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸುರೇಶ್ ವಿದ್ಯಾರ್ಥಿಗಳೊಂದಿಗೆ ಬೆರೆತು ಪಾಠ ಮಾಡುತ್ತಿದ್ದರು’ ಎಂದರು. ಪ್ರಾಚಾರ್ಯರಾದ ಎಂ. ವೀರನಗೌಡ, ಆಡಳಿತ ಅಧಿಕಾರಿ ಮಲ್ಲಯ್ಯ ಕರಬಂಟನಾಳ, ಶರಣು ಅವಟೆ, ಭೀಮನಗೌಡ ಗಣಿಯಾರ, ಕನ್ನಡ ಉಪನ್ಯಾಸಕ ಅಶೋಕ್ ತಂಬಾಕೆ, ಶಿವಾನಂದ ಚಿಂಚೋಳಿ, ಶ್ರೀಕಾಂತ್ ಪಾಟೀಲ, ಸನ್ಮಾನ ಸ್ವೀಕರಿಸಿ  ಸುರೇಶ್ ಮಾತನಾಡಿದರು.

ADVERTISEMENT

ನಿವೃತ್ತ ಪ್ರಾಚಾರ್ಯ ಈಶ್ವರಪ್ಪ ಅಂಜುಟಿಗಿ, ಪುರಸಭೆ ಸದಸ್ಯರಾದ ಚಂದು ದೇಸಾಯಿ , ಚಿದಾನಂದ ಮಠ, ಎಸ್‌.ಎ. ತೋಳನೂರ, ಕೆ. ನಾರಾಯಣ, ಸತೀಶ್ ನೀಲಂಗೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.