ADVERTISEMENT

ಕಲಬುರಗಿ | ಅಪಘಾತ ಪ್ರಕರಣ: ಅಪರಾಧಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:56 IST
Last Updated 19 ನವೆಂಬರ್ 2025, 6:56 IST
.
.   

ಕಲಬುರಗಿ: ಕಾರು–ಬೈಕ್‌ ನಡುವೆ ಸಂಭವಿಸಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನಿಗೆ ಅಫಜಲಪುರದ ಜೆಎಂಎಫ್‌ಸಿ ನ್ಯಾಯಾಲಯವು ಒಂದು ವರ್ಷ ಜೈಲು, ₹ 10 ಸಾವಿರ ದಂಡ ವಿಧಿಸಿದೆ.

ಅಫಜಲಪುರದ ಲಿಂಬಿತೋಟ ನಿವಾಸಿ ಸಂತೋಷ ಲಕ್ಷಣ ದರ್ಗಾಶಿರೂರ  ಶಿಕ್ಷೆಗೆ ಒಳಗಾದ ಅಪರಾಧಿ.

2021ರ ಜನವರಿ 20ರಂದು ಕಾರು ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿತ್ತು. ಅವಘಡದಲ್ಲಿ ಬೈಕ್‌ ಸವಾರ ಬಸವರಾಜ ಚವ್ಹಾಣ ಸ್ಥಳದಲ್ಲೇ ಅಸುನೀಗಿದ್ದರು. ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದ. ಈ ಸಂಬಂಧ  ದೇವಲಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖಾಧಿಕಾರಿಗಳಾಗಿದ್ದ ಭೀಮರತ್ನಾ ಹಾಗೂ ಜಗದೇವಪ್ಪ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಈ ಪ್ರಕರಣದಲ್ಲಿ ವಾದ–ಪ್ರತಿವಾದ ಆಲಿಸಿದ ಅಫಜಲಪುರ ಜೆಎಂಎಫ್‌ಸಿ ನ್ಯಾಯಾಧೀಶ ಅನೀಲ ಅಮಾಟೆ ಅವರು ಅಪರಾಧಿ ಸಂತೋಷಗೆ ಶಿಕ್ಷೆ, ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ ಪಿ. ವಾದ ಮಂಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.