ಅಫಜಲಪುರ: ಪಟ್ಟಣದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ್ದ ತಂದೆಗೆ ಅಫಜಲಪುರ ಜೆಎಂಎಫ್‌ಸಿ ನ್ಯಾಯಾಲಯ ₹26 ಸಾವಿರ ದಂಡ ವಿಧಿಸಿದೆ.
ಆ.7ರಂದು ಸಂಜೆ ಪಟ್ಟಣದ ಎಪಿಎಂಸಿ ರಸ್ತೆಯಲ್ಲಿ ಅಪ್ರಾಪ್ತ ಬಾಲಕ ಕೆಎ 32 ಆರ್ 9972 ಸಂಖ್ಯೆಯ ಬೈಕ್ ಮೇಲೆ ಬರುತ್ತಿರುವಾಗ ಕರ್ತವ್ಯದಲ್ಲಿದ್ದ ಅಫಜಲಪುರ ಪಿಎಸ್ಐ ಸೋಮನಿಂಗ ಒಡೆಯರ್ ವಾಹನ ತಡೆದು ತಪಾಸಣೆ ನಡೆಸಿದ್ದಾರೆ. 181, 199(ಎ) ಮೊಟಾರ್ ವಾಹನ ಕಾಯ್ದೆ ಅಡಿ ಸಂಚಾರ ನಿಯಮ ಉಲ್ಲಂಘಿಸಿದ್ದರಿಂದ ಪಟ್ಟಣದ ಎಂ.ಜಿ.ನಗರದ ನಿವಾಸಿ ಗುರಲಿಂಗಪ್ಪ ಜಂಬಗಿ (45) ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅನೀಲ ಅಮಾತೆ ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕೆ ತಂದೆಗೆ ₹26 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.