ADVERTISEMENT

ಅಫಜಲಪುರ | ಸಂಭ್ರಮದ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:48 IST
Last Updated 29 ಆಗಸ್ಟ್ 2025, 6:48 IST
ಅಫಜಲಪುರ ತಾಲೂಕಿನ ಅಳ್ಳಗಿ (ಕೆ)  ಗ್ರಾಮದಲ್ಲಿ ವಿಜಯ ಮಹಾಲಕ್ಷ್ಮಿ ಜಾತ್ರೆ ಸಡಗರದಿಂದ ಜರುಗಿತು
ಅಫಜಲಪುರ ತಾಲೂಕಿನ ಅಳ್ಳಗಿ (ಕೆ)  ಗ್ರಾಮದಲ್ಲಿ ವಿಜಯ ಮಹಾಲಕ್ಷ್ಮಿ ಜಾತ್ರೆ ಸಡಗರದಿಂದ ಜರುಗಿತು   

ಅಫಜಲಪುರ: ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮದ ಗ್ರಾಮದೇವತೆ ವಿಜಯಮಹಾಲಕ್ಷ್ಮಿ ಜಾತ್ರೆ ಬುಧವಾರ ಸಡಗರದಿಂದ ಜರುಗಿತು.

ದೇವಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ವಿಜಯಕುಮಾರ್ ಪಾಟೀಲ ಅವರ ಮನೆಯಿಂದ ವಿವಿಧ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಯಿತು. ಭೀಮಾನದಿ ದಡದ ಮೇಲೆ ಗಂಗಿ ಸೀತಾಳ ಪೂಜೆ ಸಲ್ಲಿಸಿ ನಂತರ ಗ್ರಾಮದ ದೇವಸ್ಥಾನಕ್ಕೆ ಪ್ರವೇಶಿಸಿದರು. ವೀರಕಾರ ಪೂಜಾರಿ ಅವರು ಮುಂದಿನ ವರ್ಷದ ಮಳೆ ಬೆಳೆ ಕುರಿತು ಭವಿಷ್ಯದ ನಡಿದರು.

ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕಾಯಿ ಕರ್ಪುರ, ನೈವೇದ್ಯ ಅರ್ಪಿಸಿದರು. ಸಂಜೆ 8.30ಕ್ಕೆ ದೇವಿಯ ಮೂರ್ತಿಯೂಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಕಳಸ ಮೆರವಣಿಗೆ ನಡೆಯಿತು.

ADVERTISEMENT

ವಿಜಯಲಕ್ಷ್ಮೀ ಪೂಜಾರಿ, ದತ್ತಾತ್ರೇಯ ಶಿಂಧೆ, ಕೃಷ್ಣಾತರಾವು ಪಾಟೀಲ, ಶಾಮರಾವ್ ಪಾಟೀಲ, ದತ್ತಾತ್ರೇಯ ಪಾಟೀಲ ಸೂರ್ಯಕಾಂತಿ, ಸುನೀಲ ಪಾಟೀಲ, ವಿಜಯಕುಮಾರ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಮಹೇಶ್ ಚಿಕ್ಕಳಗಿ, ಮಲಕಯ್ಯ ಮಠ, ಶಿವಲಿಂಗಯ್ಯ ದೇವಣಗಾಂವ, ಕಾಸಿಂಶೇಖ್‌ ಮಹ್ಮದ ಶೇಖ್‌, ಅಕ್ಬರ್ ಬಾಗವಾನ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.