ADVERTISEMENT

ಅಫಜಲಪುರ: ಸಿದ್ದನೂರು- ರೇವೂರ (ಬಿ) ಸಂಚಾರಕ್ಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:20 IST
Last Updated 24 ಜುಲೈ 2025, 5:20 IST
ಅಫಜಲಪುರ ತಾಲೂಕಿನ ಸಿದ್ಧನೂರಿನಿಂದ ರೇವೂರು (ಬಿ) ಗ್ರಾಮಕ್ಕೆ ಸಂಚರಿಸುವ ರಸ್ತೆ ಬುಧವಾರ ಮಳೆ ನೀರಿನಿಂದ ಸಂಚಾರ ಸ್ಥಗಿತವಾಗಿರುವುದು
ಅಫಜಲಪುರ ತಾಲೂಕಿನ ಸಿದ್ಧನೂರಿನಿಂದ ರೇವೂರು (ಬಿ) ಗ್ರಾಮಕ್ಕೆ ಸಂಚರಿಸುವ ರಸ್ತೆ ಬುಧವಾರ ಮಳೆ ನೀರಿನಿಂದ ಸಂಚಾರ ಸ್ಥಗಿತವಾಗಿರುವುದು   

ಅಫಜಲಪುರ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಸಿದ್ಧನೂರು ಮತ್ತು ರೇವೂರ (ಬಿ) ಗ್ರಾಮಕ್ಕೆ ಸಂಚರಿಸುವ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ಸಂಪೂರ್ಣ ಮಳೆ ನೀರಿನಿಂದ ತುಂಬಿದ್ದು ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಸಿದ್ಧನೂರಿನಿಂದ ರೇವೂರು (ಬಿ) ಗ್ರಾಮದ ರಸ್ತೆ ಕಚ್ಚಾ ರಸ್ತೆಯಾಗಿದ್ದು, ರಸ್ತೆಯ ಎರಡು ಕಡೆ ಗಿಡಗಂಟಿಗಳು ಬೆಳೆದುಕೊಂಡಿವೆ. ಮಳೆಯ ನೀರು ಬೇರೆ ಕಡೆ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಮಳೆ ನೀರು ರಸ್ತೆ ಮೇಲೆ ಸಂಗ್ರವಾಗುತ್ತದೆ. ಮಳೆ ಬಂದಾಗ ರಸ್ತೆ ಸಂಚಾರ ಬಂದ್ ಆಗುತ್ತದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು. ರಸ್ತೆಯ ಎರಡು ಬದಿಯಲ್ಲಿ ಬೆಳೆದ ನಿಂತಿರುವ ಗಿಡಗಂಟಿಗಳನ್ನ ತೆರವು ಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT