ಜೇವರ್ಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಶಿವಗಂಗಾ ಆಗ್ರೋ ಕೇಂದ್ರದ ರಸಗೊಬ್ಬರ ದಾಸ್ತಾನು ಮಳಿಗೆ ಮೇಲೆ ಬುಧವಾರ ರಾತ್ರಿ ಕೃಷಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಯೂರಿಯಾ, ಡಿಎಪಿ ಮಾರಾಟ ಮಾಡಲಾಗುತ್ತಿದೆ ಎಂದು ಹೋರಾಟಗಾರ ಶ್ರವಣಕುಮಾರ ನಾಯಕ, ಈಶ್ವರ ಹಿಪ್ಪರಗಿ ಹಾಗೂ ರೈತರಿಂದ ದೂರು ಬಂದ ಹಿನ್ನಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕೃಷಿ ಅಧಿಕಾರಿಗಳಾದ ಪವನಕುಮಾರ ಕಟ್ಟಿಮನಿ, ಸಾಕ್ಷಿ ಅಲಮದ್ ಅವರ ತಂಡ ದಾಳಿ ನಡೆಸಿದೆ.
500 ಚೀಲ ಡಿಎಪಿ, 150 ಚೀಲ ಯೂರಿಯಾ ಹಾಗೂ ವಿವಿಧ ಕಂಪನಿಯ ರಸಗೊಬ್ಬರ ದಾಳಿ ವೇಳೆ ಮಳಿಗೆಯಲ್ಲಿ ಕಂಡು ಬಂದಿದ್ದು, 1300ಕ್ಕೂ ಅಧಿಕ ರಸಗೊಬ್ಬರದ ಚೀಲಗಳನ್ನು ಜಪ್ತಿ ಮಾಡಲಾಗಿದೆ. ಶಿವಗಂಗಾ ಆಗ್ರೋ ಮಾಲೀಕರಿಗೆ ಜು.30 ರಿಂದ ಆ.7 ರ ವರೆಗೆ ಮಾರಾಟ ತಡೆಗೆ ಆದೇಶ ಮಾಡಲಾಗಿದ್ದು ಮತ್ತು ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ‘ಪ್ರಜಾವಾಣಿ’ ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.