ADVERTISEMENT

ಅಂಬೇಡ್ಕರ್ ಸಮಾನತೆಗೆ ಶ್ರಮಿಸಿದ ನಾಯಕ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 1:07 IST
Last Updated 29 ಏಪ್ರಿಲ್ 2022, 1:07 IST
ಚಿಂಚೋಳಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಪ್ರಜಾಪ್ರಭುತ್ವದ ಹಬ್ಬ ಕಾರ್ಯಕ್ರಮವನ್ನು ಶಾಸಕ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಶಾಸಕ ಡಾ. ಅವಿನಾಶ ಜಾಧವ, ಸುಭಾಷ ರಾಠೋಡ ಇದ್ದರು
ಚಿಂಚೋಳಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಪ್ರಜಾಪ್ರಭುತ್ವದ ಹಬ್ಬ ಕಾರ್ಯಕ್ರಮವನ್ನು ಶಾಸಕ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಶಾಸಕ ಡಾ. ಅವಿನಾಶ ಜಾಧವ, ಸುಭಾಷ ರಾಠೋಡ ಇದ್ದರು   

ಚಿಂಚೋಳಿ: ಭಾರತವು ಜಗತ್ತಿನ ಅತಿದೊಡ್ಡ ಸಂವಿಧಾನ ಹೊಂದಿದ್ದು, ಭಾರತೀಯರ ಏಳ್ಗೆಯ ಆಶಯ ಹೊಂದಿದೆ. ಆದರೆ, ಕೆಲವರು ಇದನ್ನು ದಲಿತರಿಗೆ ಸೀಮಿತಗೊಳಿಸುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಗುರುವಾರ ನಡೆದ ಪ್ರಜಾಪ್ರಭುತ್ವದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಫಲಾನುಭವಿ. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಹಾಗೂ ಜನರ ಸಾಮಾಜಿಕ ಸಮಾನತೆಗೆ ಹೋರಾಡಿದ ನಾಯಕ ಎಂದರು.

ADVERTISEMENT

ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ ಭಾರತೀಯ ಸಂವಿಧಾನದಿಂದ ನಾನು ವೈದ್ಯನಾಗಿದ್ದೇನೆ. ಎಲ್ಲರೂ ಜತೆಯಾಗಿ ಸಾಗಬೇಕು. ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.

ಸುಭಾಷ ರಾಠೋಡ, ಸಂಜೀವ ಯಾಕಾಪುರ, ಆನಂದ ಟೈಗರ್ ಮಾತನಾಡಿದರು. ಬೆಲ್ದಾಳ ಶರಣರು ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜಗದೇವಿ ಶಂಕರರಾವ್ ಗಡಂತಿ, ದೀಪಕನಾಗ್ ಪುಣ್ಯಶೆಟ್ಟಿ, ಭೀಮರಾವ್ ಟಿಟಿ, ಗೋಪಾಲರಾವ್ ಕಟ್ಟಿಮನಿ, ಗೌತಮ ಪಾಟೀಲ, ರವಿರಾಜ ಕೊರವಿ, ಬಸವರಾಜ ಮಾಲಿ, ಲಕ್ಷ್ಮಣ ಆವುಂಟಿ, ಬಸವರಾಜ ಬೆಣ್ಣೂರು, ರಾಮಚಂದ್ರ ಜಾಧವ, ಮಂಜುನಾಥ ಕೊರವಿ, ಗೋಪಾಲ ಜಾಧವ, ಹಣಮಂತ ಗುತ್ತೇದಾರ, ಸುದರ್ಶನ ಬಿರಾದಾರ, ಬಸವೇಶ್ವರ ಹೀರಾ, ಚಿತ್ರಶೇಖರ ಪಾಟೀಲ, ಇಂದುಮತಿ ಮನೋಹರ, ಆರ್ ಗಣಪತರಾವ್, ಪ್ರವೀಣ ಟಿಟಿ, ಶ್ರೀಮಂತ ಕಟ್ಟಿಮನಿ ಇದ್ದರು.

ಜಯಂತಿ ಸಮಿತಿ ಅಧ್ಯಕ್ಷ ಆನಂದ ಟೈಗರ್ ಸ್ವಾಗತಿಸಿದರು. ಅಶೋಕ ಹೂವಿನಭಾವಿ ನಿರೂಪಿಸಿದರು. ಗೋಪಾಲ ರಾಂಪುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.