ADVERTISEMENT

ಪ್ರಶಸ್ತಿ ಪ್ರದಾನ ನಾಳೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:01 IST
Last Updated 25 ಜನವರಿ 2021, 16:01 IST

ಕಲಬುರ್ಗಿ: ನೇತಾಜಿ ಸುಭಾಷಚಂದ್ರ ಬೋಸ್ ಜಯಂತಿ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನವು ಪರಾಕ್ರಮ ದಿನ ಹಾಗೂ ಪರಿವರ್ತನೆಗಾಗಿ ಪ್ರೇರಣೋಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರಿಗೆ ‘ಶಿಕ್ಷಕ ಚಂದ್ರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಿರನೂರಿನ ಬಾರತೀಯ ವಿದ್ಯಾ ಮಂದಿರದಲ್ಲಿ ಜ. 27ರಂದು ಬೆಳಿಗ್ಗೆ 11.15ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಶಿಕ್ಷಕರಾದ ಅರುಣಾ ಎನ್.ಜಮಾದಾರ, ಅಸ್ತಾಕ್ ಅ. ಪಟೇಲ್, ಭಾಗ್ಯಶಿಲ್ಪಾ ಆಲೇಗಾಂವ, ಶೋಭಾದೇವಿ, ಮೀನಾಕ್ಷಿ ವೈಜನಾಥ ಮೈನಾಳೆ, ಹುಲಿಕಂಠರಾಯ ಹೇರೂರ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಉದ್ಘಾಟಿಸಲಿದ್ದು, ಭಾರತೀಯ ವಿದ್ಯಾ ಮಂದಿರದ ಸದಸ್ಯ ರಾಜಶೇಖರ ಗುಡ್ಡಾ ಅಧ್ಯಕ್ಷತೆ ವಹಿಸಲಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಪ್ರೊ.ಬಿ.ಡಿ. ಕಲಬುರಗಿ, ಮಾಜಿ ಸೈನಿಕ ಶಾಂತಯ್ಯಸ್ವಾಮಿ ಸಂದಿಮಠ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.