ADVERTISEMENT

ಅಂತರ ವಿ.ವಿ ಟೂರ್ನಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 13:01 IST
Last Updated 11 ಡಿಸೆಂಬರ್ 2018, 13:01 IST
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್‌ ಟೂರ್ನಿಗೆ ಆಯ್ಕೆಯಾಗಿರುವ ಗುಲಬರ್ಗಾ ವಿಶ್ವವಿದ್ಯಾಲಯದ ತಂಡ
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್‌ ಟೂರ್ನಿಗೆ ಆಯ್ಕೆಯಾಗಿರುವ ಗುಲಬರ್ಗಾ ವಿಶ್ವವಿದ್ಯಾಲಯದ ತಂಡ   

ಕಲಬುರ್ಗಿ: ಚೆನ್ನೈನ ಕಾಟನಕುಲತ್ತು ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಡಿ.12ರಿಂದ 16ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟ್ (ಪುರುಷ) ಟೂರ್ನಿಯಲ್ಲಿಗುಲಬರ್ಗಾ ವಿಶ್ವವಿದ್ಯಾಲಯದ ತಂಡ ಪಾಲ್ಗೊಳ್ಳಲಿದೆ.

ತಂಡದ ನಾಯಕರಾಗಿ ಅಮರೇಶ ಎ.ನಾಯಕ, ಸದಸ್ಯರಾಗಿ ರಾಮಾಂಜನೇಯ, ಇಬ್ರಾಹಿಂಸಾಬ, ರಾಘವೇಂದ್ರ, ಅಮರೇಶ, ಅಭಿಲಾಷ್ ಎಲ್., ಅಭಿಲಾಷ ಎಂ., ಪ್ರಾಣೇಶ ಕೆ. ಭಾಗವಹಿಸುವರು. ಸುರಪುರದ ಜೆ.ಎಂ.ಬೊಹರಾ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ರಮೇಶ ಎಸ್. ಅವರು ತಂಡದ ವ್ಯವಸ್ಥಾಪಕ/ ತರಬೇತುದಾರರಾಗಿ ಕಾರ್ಯ ನಿರ್ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT