ADVERTISEMENT

ಅಫಜಲಪುರ | ಸಂಘಟನೆಯಿಂದ ದುರ್ಬಲರು ಮುನ್ನೆಲೆಗೆ: ಸಂಸದ ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:06 IST
Last Updated 1 ಸೆಪ್ಟೆಂಬರ್ 2025, 7:06 IST
ಅಫಜಲಪುರ ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲನಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಆಯೋಜಿದ್ದ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಉದ್ಘಾಟಿಸಿದರು.
ಅಫಜಲಪುರ ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲನಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಆಯೋಜಿದ್ದ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಉದ್ಘಾಟಿಸಿದರು.   

ಅಫಜಲಪುರ: ‘ಸಂಘಟನೆಯ ಮೂಲಕ ದುರ್ಬಲರನ್ನು ಮುನ್ನೆಲೆಗೆ ತರಲು ಸಾಧ್ಯ. 12ನೇ ಶತಮಾನದ ಶರಣರ ಸಂದೇಶದಂತೆ ಬಣಜಿಗ ಸಮಾಜ ನಡೆಯುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲನಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿದ್ದ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಯಲ್ಲಿ ಇತರೆ ಉಪ ಪಂಗಡಗಳಿಗೆ ನೋವಾಗದಂತೆ ನೋಡಿಕೊಳ್ಳಬೇಕು. ನಾನು ಮುಖ್ಯಮಂತ್ರಿ ಇದ್ದಾಗ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ 2ಎ ಮೀಸಲಾತಿ ನೀಡಿದ್ದೇನೆ. ಹೌಸಿಂಗ್‌ ಬೋರ್ಡ್‌ನ ಅಡಿಯಲ್ಲಿ ಧಾರವಾಡದಲ್ಲಿ 2 ಎಕರೆ ಮತ್ತು ಗದಗನಲ್ಲಿ ಬಣಜಿಗ ಭವನ ನಿರ್ಮಾಣಕ್ಕೆ ಜಮೀನು ನೀಡಲಾಗಿದೆ ಎಂದರು.

ADVERTISEMENT

ರಚನಾತ್ಮಕ ಕೆಲಸಗಳ ಮೂಲಕ ಎಲ್ಲರಿಗೂ ಶಕ್ತಿ ತುಂಬಬೇಕು. ಸಮಾಜದಲ್ಲಿ ಆರ್ಥಿಕ ತೊಂದರೆ ಅನುಭವಿಸುತ್ತಿರುವ, ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಸಂಘದಿಂದ ಸಹಾಯ ಮಾಡಬೇಕು ಎಂದರು.

ಶಾಸಕ ಎಂ.ವೈ ಪಾಟೀಲ ಮಾತನಾಡಿ, ‘ಬಣಜಿಗ ಸಮಾಜದವರು ಸಂಘಟನೆ ಮಾಡಿ ಸಮಾವೇಶ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬಣಜಿಗ ಸಮಾಜ ಶ್ರೀಮಂತ ಸಮಾಜವಾಗಿದ್ದು ಪರೋಪಕಾರಿ ಕೆಲಸ ಕಾರ್ಯಗಳು ನಡೆಯಬೇಕು ಎಂದರು.

ಬಣಜಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಬಸಣ್ಣ ಗುಣಾರಿ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ, ಅಮರನಾಥ ಪಾಟೀಲ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೋಡಗಿ ಮಾತನಾಡಿದರು.

ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ನಿತೀನ ಗುತ್ತೇದಾರ, ಬಸಣ್ಣ ಗುಣಾರಿ, ಮಹಾಂತೇಶ ನೂಲಾ, ಶರಣು ನೂಲಾ, ಮಲ್ಲಿಕಾರ್ಜುನ ಮೋದಿ, ಬಿ.ಎಸ್.ಹಂಚಲಿ, ಶಿವಕುಮಾರ ಗುಂದಗಿ, ಸಂತೋಷ ದಾಮಾ, ಮುರುಘೇಂದ್ರ ಮಸಳಿ, ಜಿ.ಎಸ್. ಬಾಳಿಕಾಯಿ, ಧಾನು ಫತಾಟೆ, ಸುನೀಲ ಶೆಟ್ಟಿ, ಸಚೀನ ಶೆಟ್ಟಿ, ಪ್ರಶಾಂತ ನಿಗಡಿ, ಶೈಲೇಶ ಗುಣಾರಿ, ಸಂತೋಷ ಶೆಟ್ಟಿ, ಧನರಾಜ ನೂಲಾ, ಸೋಮು ಶ್ರೀಗಿರಿ, ಮಹಾಂತೇಶ ಗುಣಾರಿ ಇತರರಿದ್ದರು.

ಕಾಯಕ ರತ್ನ ಪ್ರಶಸ್ತಿ ಪ್ರದಾನ
ನಿವೃತ್ತ ಶಿಕ್ಷಕ ಶಿವಶರಣಪ್ಪ ರೋಡಿಗಿ ಸಿಪಿಐ ರಾಜಶೇಖರ್ ಹಳಗೋದಿ ಉದ್ಯಮಿದಾರರಾದ ರವೀಂದ್ರ ಕಣ್ಣಿ ನಿವೃತ್ತ ಇಂಜಿನಿಯರ್ ಸಿದ್ದರಾಮ ಅಜಗೊಂಡ ಮಕ್ಕಳ ತಜ್ಞ ಡಾ.ವೀರಭದ್ರಪ್ಪಸೋಬಾನಿ ಶ್ರಮಜೀವಿ ಗುಂಡು ಬಡದಾಳ ಅವರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.