ADVERTISEMENT

ಬೆಂಗಳೂರು–ಬೀದರ್‌ ವಿಶೇಷ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 16:12 IST
Last Updated 16 ಜೂನ್ 2025, 16:12 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಕಲಬುರಗಿ: ಎಸ್‌ಎಂವಿಟಿ ಬೆಂಗಳೂರು ಮತ್ತು ಬೀದರ್‌ ನಡುವೆ ವಿಶೇಷ ರೈಲು (ರೈಲು ಸಂಖ್ಯೆ 06539/06540) ಕೆಳಕಂಡ ದಿನಾಂಕಗಳಂದು 10 ಟ್ರಿಪ್‍ಗಳಲ್ಲಿ ಸಂಚರಿಸುತ್ತಿದ್ದು, ಈ ವಿಶೇಷ ರೈಲು ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಕಲಬುರಗಿ, ಶಹಾಬಾದ್ ಹಾಗೂ ವಾಡಿ ರೈಲು ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ.

ADVERTISEMENT

ಎಸ್‍ಎಂವಿಟಿ ಬೆಂಗಳೂರು–ಬೀದರ್‌ ವಿಶೇಷ ರೈಲುಗಳು (ರೈಲು ಸಂಖ್ಯೆ 06539) (5 ಟ್ರಿಪ್) ಪ್ರತಿ ಶುಕ್ರವಾರ ಮತ್ತು ಭಾನುವಾರ ಜೂನ್ 15ರಿಂದ 29ರವರೆಗೆ ಎಸ್‍ಎಂವಿಟಿ ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 10.15ಕ್ಕೆ ಬೀದರ್‌ ತಲುಪಲಿದೆ.

​​ವಿಶೇಷ ರೈಲು ಸಂಖ್ಯೆ 06540 (5 ಟ್ರಿಪ್) ಪ್ರತಿ ಶನಿವಾರ ಮತ್ತು ಸೋಮವಾರ ಜೂನ್‌ 16ರಿಂದ 30ರವರೆಗೆ ಬೀದರ್‌ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಎಸ್‍ಎಂವಿಟಿ ಬೆಂಗಳೂರಿಗೆ ತಲುಪಲಿದೆ. ಈ ರೈಲು ಹುಮನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕದಲ್ಲಿ ನಿಲ್ಲಲಿದೆ.

ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸಬೇಕು. ಟಿಕೆಟ್‍ಗಾಗಿ ಕಾಯ್ದಿರಿಸಲು ಎಲ್ಲ ಗಣಕೀಕೃತ ಕೇಂದ್ರ ಮತ್ತು www.irctc.co.in ವೆಬ್‍ಸೈಟ್‍ನ್ನು ಸಂಪರ್ಕಿಸಬೇಕು. ರೈಲಿನ ಸಮಯ ಮತ್ತು ನಿಲುಗಡೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಭೇಟಿ ನೀಡಿ ಅಥವಾ ಎನ್‌ಟಿಇಎಸ್‌ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.