ಕಲಬುರಗಿ: ಬಿಜೆಪಿಯಿಂದ ಉಚ್ಚಾಟಿತರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ತಡರಾತ್ರಿ ಚಿಂಚೋಳಿಗೆ ಬಂದು, ತಮ್ಮ ಸಿದ್ಧಸಿರಿ ಎಥೆನಾಲ್ ಪವರ್ ಘಟಕದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಗುರುವಾರ ಇಡೀ ದಿನ ಅತಿಥಿ ಗೃಹದ ಮುಂಭಾಗ ಕಾದು ಕುಳಿತರೂ ಕಾಣಿಸಿಕೊಳ್ಳದೇ ಅಂತರ ಕಾಯ್ದುಕೊಂಡರು.
ದೆಹಲಿಯಿಂದ ವಿಮಾನದಲ್ಲಿ ಹೈದರಾಬಾದ್‌ಗೆ ಬಂದ ಯತ್ನಾಳ, ಅಲ್ಲಿಂದ ಕಾರಿನಲ್ಲಿ ಚಿಂಚೋಳಿಗೆ ಬಂದು ಅತಿಥಿ ಗೃಹದಲ್ಲಿ ತಂಗಿದರು. ಅವರೊಂದಿಗೆ ಪುತ್ರ ರಾಮನಗೌಡ ಪಾಟೀಲ, ಕಾರ್ಖಾನೆಯ ನಿರ್ದೇಶಕರು ಇದ್ದರು. ಯತ್ನಾಳ ಅವರನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಅತಿಥಿ ಗೃಹದ ಆವರಣ ಪ್ರವೇಶಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ತಡೆದು ಅವರನ್ನು ಹೊರಗೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.