ADVERTISEMENT

ಬಸವ ಜಯಂತಿ; ಕಿಟ್, ಮಾಸ್ಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 3:47 IST
Last Updated 15 ಮೇ 2021, 3:47 IST
ಕಲಬುರ್ಗಿಯಲ್ಲಿ ಶುಕ್ರವಾರ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸದಸ್ಯರು ಕೊರೊನಾ ಸಂಕಷ್ಟಕ್ಕೆ ಒಳಗಾದ ಬಡವರು, ಕೂಲಿಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ಮತ್ತು ಮಾಸ್ಕ್‌ಗಳನ್ನು ನೀಡಿದರು. ‌
ಕಲಬುರ್ಗಿಯಲ್ಲಿ ಶುಕ್ರವಾರ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸದಸ್ಯರು ಕೊರೊನಾ ಸಂಕಷ್ಟಕ್ಕೆ ಒಳಗಾದ ಬಡವರು, ಕೂಲಿಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ಮತ್ತು ಮಾಸ್ಕ್‌ಗಳನ್ನು ನೀಡಿದರು. ‌   

ಕಲಬುರ್ಗಿ: ಬಸವ ಜಯಂತಿ ಪ್ರಯುಕ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸದಸ್ಯರು ಶುಕ್ರವಾರ ಕೊರೊನಾ ಸಂಕಷ್ಟಕ್ಕೆ ಒಳಗಾದ ಬಡವರು, ಕೂಲಿಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ಮತ್ತು ಮಾಸ್ಕ್‌ಗಳನ್ನು ನೀಡಿದರು. ‌

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಕಾಯಕಯೋಗಿ ಬಸವಣ್ಣನವರ ದಾಸೋಹ ಸೂತ್ರ ನಮಗೆಲ್ಲಾ ಆದರ್ಶವಾಗಿದೆ. ಅವರ ಶರಣ ಪರಂಪರೆ ಮಹತ್ವ ಮತ್ತು ವಿಚಾರಗಳನ್ನು ಜಗತ್ತಿಗೆ ಸಾರಬೇಕಿದೆ’ ಎಂದರು.

ಸಮಾಜ ಸೇವಕಿ ಮಹೇಶ್ವರಿ ವಾಲಿ ಮಾತನಾಡಿ, ‘ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವಂಥ ಆದರ್ಶದ ಮಾರ್ಗ ಹಾಕಿ ಕೊಟ್ಟವರು ಅಣ್ಣ ಬಸವಣ್ಣ. ಎಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.

ADVERTISEMENT

ಬಿಜೆಪಿ ನಾಯಕಿ ವಿಜಯಲಕ್ಷ್ಮಿ ಗೊಬ್ಬೂರಕರ್ ಅವರು ತಮ್ಮ ಮನೆಯಲ್ಲಿ ತಯಾರಿಸಿದ ಗುಣಮಟ್ಟದ ಮಾಸ್ಕ್‌ಗಳನ್ನು ಜನರಿಗೆ ವಿತರಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಡಿ.ಬಡಿಗೇರ, ಸಮಾಜ ಸೇವಕರಾದ ಸಂಗೀತಾ ಕಟ್ಟಿಮನಿ, ಶಿವಾನಂದ ಮಠಪತಿ, ಮಂಜುನಾಥ ಕಂಬಳಿಮಠ, ಶಿವಕುಮಾರ ಪಾಟೀಲ, ಬಸವರಾಜ ಆವಂಟಿ, ಸುರೇಶ ವಗ್ಗೆ, ವಿಶ್ವನಾಥ ತೊಟ್ನಳ್ಳಿ, ಭುವನೇಶ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.