ADVERTISEMENT

ಕಂಪನಿಗಳಲ್ಲಿ ಸ್ಥಾನ ಪಡೆದ ಶರಣಬಸವ ವಿವಿ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:13 IST
Last Updated 8 ಜನವರಿ 2026, 6:13 IST
ಶಿವಾನಿ ಪಾಟೀಲ
ಶಿವಾನಿ ಪಾಟೀಲ   

ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಹಿಳೆಯರಿಗೆ ಮಾತ್ರ ಇರುವ ಬಿಬಿಎ ಕೋರ್ಸ್‌ 5ನೇ ಸೆಮಿಸ್ಟರ್‌ನ ಐದು ವಿದ್ಯಾರ್ಥಿಗಳನ್ನು ಬೆಂಗಳೂರಿನ ಎರಡು ಕಂಪನಿಗಳು ಆಯ್ಕೆ ಮಾಡಿವೆ. ಆರು ತಿಂಗಳ ಅವಧಿಗೆ ಇಂಟರ್ನ್‍ಗಳಾಗಿ ಪ್ರವೇಶ ಪಡೆದಿದ್ದು, ಪೂರ್ಣಗೊಂಡ ನಂತರ ಶಾಶ್ವತ ಉದ್ಯೋಗಿಗಳಾಗಿ ಸೇರಿಸಿಕೊಳ್ಳಲಿದ್ದಾರೆ ಎಂದು ಬಿಬಿಎ ವಿಭಾಗದ ಚೇರ್‌ಪರ್ಸನ್ ಶಿಲ್ಪಾ ಕಂದಗೂಳ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಮೂಲದ ಜಾಗತಿಕ ಆನ್‍ಲೈನ್ ವೃತ್ತಿಪರ ನಿರ್ವಹಣಾ ಕಂಪನಿಯಾದ ಇಂಟೆಲ್ಲಿಪೀಟ್‍ನಿಂದ ಶಿವಾನಿ ಪಾಟೀಲ, ಸುಷ್ಮಾ ಗೌತಮ್ ಮತ್ತು ಫರಿಯಾ ಅಂಜುಮ್ ಅವರನ್ನು ಬಿಸಿನೆಸ್ ಡೆವಲಪ್‍ಮೆಂಟ್ ಅಸೋಸಿಯೇಟ್ ಆಗಿ ಆಯ್ಕೆ ಮಾಡಲಾಗಿದೆ. ಈ ಕಂಪನಿಯು ವಾರ್ಷಿಕ ₹8 ಲಕ್ಷ ಪ್ಯಾಕೇಜ್ ಘೋಷಿಸಿದ್ದು, ಆರು ತಿಂಗಳ ಇಂಟರ್ನ್‍ಶಿಪ್ ಅವಧಿಯಲ್ಲಿ ₹25,000 ಸ್ಟೈಫಂಡ್ ನೀಡಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಮತ್ತೊಂದು ನಿರ್ವಹಣಾ ಕಂಪನಿಯಾದ ಬೆಲ್‍ಫಾಸ್ಟ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಲಿಪ್ಸಿತಾ ದಾಸ್ ಮತ್ತು ಶೀತಲ್ ಯಾದವ್ ಅವರನ್ನು ಮಾನವ ಸಂಪನ್ಮೂಲ ನೇಮಕಾತಿದಾರರನ್ನಾಗಿ ಆಯ್ಕೆ ಮಾಡಿದೆ. ₹3 ಲಕ್ಷ ವಾರ್ಷಿಕ ಪ್ಯಾಕೇಜ್‌ ಘೋಷಿಸಿದ್ದು, ಈ ವಿದ್ಯಾರ್ಥಿಗಳು ಆರು ತಿಂಗಳ ಇಂಟರ್ನ್‍ಶಿಪ್ ಅವಧಿಯಲ್ಲಿ ತಲಾ ₹8000 ಮಾಸಿಕ ಸ್ಟೈಫಂಡ್ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.

ADVERTISEMENT

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಣಿ ಎಸ್‌.ಅಪ್ಪ, ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವ ಎಸ್. ಜಿ. ಡೊಳ್ಳೇಗೌಡರ್, ಡೀನ್ ಲಕ್ಷ್ಮಿ ಪಾಟೀಲ ಮಾಕಾ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸಿದ್ದಾರೆ.

ಸುಷ್ಮಾ ಗೌತಮ್
ಫರಿಯಾ ಅಂಜುಮ್
ಲಿಪ್ಸಿತಾ ದಾಸ್
ಶೀತಲ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.